ಬ್ಲೂಮ್ಬರ್ಗ್ನ ಏಷ್ಯಾದ ಅತಿಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮತ್ತೆ ನಂಬರ್ 1 ಪಟ್ಟಕ್ಕೇರಿದ್ದಾರೆ. ನಂಬರ್ 1 ಸ್ಥಾನದಲ್ಲಿದ್ದ ಗೌತಮ್ ಅದಾನಿ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದಾನಿ ಅವರ ಸಂಪತ್ತಿನ ಮೌಲ್ಯ 98.7 ಶತಕೋಟಿ ಡಾಲರ್ಗೆ ಇಳಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಸಂಪತ್ತಿನ ಒಟ್ಟು ಮೌಲ್ಯ 99.7 ಶತಕೋಟಿ ಡಾಲರ್ ಇದ್ದು, ಏಷ್ಯಾದ ಅತಿಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ.
ಅದಾನಿ ಗ್ರೂಪ್ ಚೇರ್ಮನ್ ಅವರ ಸಂಪತ್ತು ಕಳೆದ ಕೆಲವು ವಾರಗಳಲ್ಲಿ 98.7 ಶತಕೋಟಿ ಡಾಲರ್ಗೆ ಇಳಿಕೆಯಾಗಿದೆ. ಕಂಪನಿಯ ಷೇರು ಮೌಲ್ಯ ಕುಸಿದುದೇ ಇದಕ್ಕೆ ಕಾರಣ.
ಜಗತ್ತಿನ ಅತಿಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಎಂಟನೇ ಸ್ಥಾನದಲ್ಲಿದ್ದಾರೆ. ಅದಾನಿ ಕಳೆದ ಕೆಲವು ವಾರಗಳ ಹಿಂದೆಯೇ 4ನೇ ಸ್ಥಾನದಿಂದ ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ.
ಈ ವರ್ಷ ಏಪ್ರಿಲ್ನಲ್ಲಿ ಅತಿಶ್ರೀಮಂತರ ಪಟ್ಟಿಯಲ್ಲಿ ಅದಾನಿ ನಾಲ್ಕನೇ ಸ್ಥಾನಕ್ಕೇರಿದ್ದರು. ಬಿಲ್ ಗೇಟ್ಸ್ ಸಂಪತ್ತಿಗೆ ಸರಿಸಮವಾದ ಸಂಪತ್ತು ಹೊಂದಿದ್ದರು.
ಜಾಗತಿಕ ಪಟ್ಟಿಯಲ್ಲಿ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ನಂಬರ್ 1 ಸ್ಥಾನದಲ್ಲಿದ್ದಾರೆ. ಇವರ ಸಂಪತ್ತಿನ ಮೌಲ್ಯ 227 ಶತಕೋಟಿ ಡಾಲರ್. ಎರಡನೇ ಸ್ಥಾನದಲ್ಲಿ ಅಮೆಜಾನ್ನ ಜೆಫ್ ಬೆಜೋಸ್ ಇದ್ದು, 149 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ.
ಜಗತ್ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಐದನೇ ಸ್ಥಾನದಲ್ಲಿದ್ದು 114 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ.