

ಸಿನಿಮಾ ತಾರೆಯರು ಅಥವಾ ಸೆಲೆಬ್ರಿಟಿಗಳು ಅಂದಮೇಲೆ ಒಂದಲ್ಲ ಒಂದು ವಿಷಯಗಳಿಗೆ ಟ್ರೋಲ್ ಆಗುತ್ತಿರುತ್ತಾರೆ. ಕೆಲವೊಂದಿಷ್ಟು ಒಳ್ಳೆಯ ವಿಚಾರಗಳಿಗೆ ಮೀಮ್ ಆದ್ರೆ, ಇನ್ನೂ ಕೆಲವು ತಾವು ಮಾಡಿಕೊಂಡ ಎಡವಟ್ಟಿಗೆ ಇರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಳ್ಳುವ ರೀತಿ ಹಾಗೂ ಮಾತನಾಡುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಬೇಕಾದರೂ ಬದಲಾಗಬಹುದು. ಸ್ಟಾರ್ ಸೆಲೆಬ್ರಿಟಿಗಳ ದಾಂಪತ್ಯ ಜೀವನದ ಬಗ್ಗೆ ಹೆಚ್ಚು ಕುತೂಹಲ ವ್ಯಕ್ತಪಡಿಸುವ ಅನೇಕರು, ದಂಪತಿಗಳಿಗೆ ಇಲ್ಲದ ಮಗುವಿನ ನಿರೀಕ್ಷೆ ಬಗ್ಗೆ ತಮಗೆ ಗೊತ್ತಿರುವಂತೆ ಅಭಿಪ್ರಾಯಗಳನ್ನು ಹೊರಹಾಕಿರುತ್ತಾರೆ.
ಸದ್ಯ ಈ ಬಿಸಿ ಇದೀಗ ಬಿಗ್ ಬಾಸ್ ವಿಜೇತನಿಗೆ ತಟ್ಟಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಆರು ವರ್ಷಗಳು ಕಳೆದರೂ ಮೊದಲ ಮಗುವಿನ ಬಗ್ಗೆ ಧ್ವನಿ ಎತ್ತದ ನಟನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ ನೆಟ್ಟಿಗರು, ಈ ದಂಪತಿಗಳು ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸಿದ್ದಾರೆ. ಸದ್ಯ ಈ ಬಗ್ಗೆ ಮಾಹಿತಿ ಪಡೆದ ದಂಪತಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು, ತದನಂತರ ಸ್ಪಷ್ಟನೆ ಸಹ ನೀಡಿದ್ದಾರೆ.
ಹಿಂದಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಪ್ರಿನ್ಸ್ ನರುಲಾ ಮತ್ತು ಅವರ ಪತ್ನಿ ಯುವಿಕಾ ಚೌಧರಿ ಮದುವೆಯಾಗಿ ಆರು ವರ್ಷಗಳು ಕಳೆದಿದೆ. ತಮ್ಮ ಮೊದಲ ಮಗುವನ್ನು ಒಟ್ಟಿಗೆ ನಿರೀಕ್ಷಿಸುತ್ತಿದ್ದಾರೆ ಎಂಬ ಸುದ್ದಿಯು ವ್ಯಾಪಕವಾಗಿ ಹರಿದಾಡಿತ್ತು. ವದಂತಿಗಳನ್ನು ತಳ್ಳಿಹಾಕಿದ ಪ್ರಿನ್ಸ್, ಈ ರೀತಿಯ ವದಂತಿಗಳು ಎಲ್ಲಿಂದ ಹೊರಹೊಮ್ಮುತ್ತವೆ ಎಂಬುದು ನನಗೆ ಗೊತ್ತಿಲ್ಲ. ನಾವು ಸುದ್ದಿಯನ್ನು ಓದಿದಾಗ, ಮೊದಲು ನಕ್ಕಿದ್ದೇವೆ ಎಂದರು.
ಯುವಿಕಾ ಇನ್ನೂ ಗರ್ಭಿಣಿಯಾಗಿಲ್ಲ. ಈ ವದಂತಿಗಳು ಸೃಷ್ಟಿಯಾಗಲು ಬಹುಶಃ ನಾನು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ಇರಬಹುದು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).