

ನೌಕರನೋರ್ವ ಮೃತಪಟ್ಟಿದ್ದರೂ ಆತನ ಶವವನ್ನು ಮುಚ್ಚಿಟ್ಟು, ವ್ಯಾಪಾರ ಮುಂದುವರಿಸುವ ಮೂಲಕ ಕ್ಯಾರಿಫೋರ್ ಸೂಪರ್ ಮಾರ್ಕೆಟ್ ಅಮಾನವೀಯತೆ ತೋರಿದೆ.
ಬ್ರೆಜಿಲ್ನ ಸೂಪರ್ಮಾರ್ಕೆಟ್ನಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಚರ್ಚೆಯಾಗುತ್ತಿದೆ. ಇಲ್ಲಿನ ಉದ್ಯೋಗಿಯೋರ್ವ ಕೆಲಸ ಮಾಡುತ್ತಿದ್ದಾಗಲೇ ಮೃತಪಟ್ಟಿದ್ದಾರೆ. ಹಾಗೆ ಆತ ಸಾವನ್ನಪ್ಪಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದು ಸೂಪರ್ ಮಾರ್ಕೆಟ್ನ ಉಳಿದ ಸಿಬ್ಬಂದಿಯ ಕರ್ತವ್ಯವಾಗಿತ್ತು. ಆದರೆ ಹೀಗೊಬ್ಬ ಕೆಲಸಗಾರ ಸತ್ತ ಎಂದು ಸುದ್ದಿಯಾದರೆ ಅಲ್ಲಿದ್ದ ಗ್ರಾಹಕರು ಹೊರಟುಹೋಗಬಹುದು ಎಂದೆಣೆಸಿ ಅಲ್ಲಿಯೇ ಒಂದು ಬದಿಯಲ್ಲಿ ಮೃತ ಕೆಲಸಗಾರನ ಶವವನ್ನು ಇಟ್ಟು, ಮೂರು ಛತ್ರಿಗಳಿಂದ ಮುಚ್ಚಿಡುವ ಮೂಲಕ ಸಿಬ್ಬಂದಿ ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ. ಇದನ್ನೂ ಓದಿ:ಶ್ರೀಶೈಲಂ ಜಲವಿದ್ಯುತ್ ಘಟಕದಲ್ಲಿ ಭೀಕರ ಅಗ್ನಿದುರಂತ; 6 ಮಂದಿ ಸಾವು
ರೆಸೆಫೆಯಲ್ಲಿರುವ ಈ ಸೂಪರ್ ಮಾರ್ಕೆಟ್ನಲ್ಲಿ ಆಗಸ್ಟ್ 14ರಂದೇ ಘಟನೆ ನಡೆದಿದ್ದರೂ ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.
ಅನೇಕ ನೆಟ್ಟಿಗರು ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ. ಇದೆಂತಾ ಕ್ರಮ ಎಂದು ಪ್ರಶ್ನಿಸಿದ್ದಾರೆ. ಸೂಪರ್ ಮಾರ್ಕೆಟ್ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. (ಏಜೆನ್ಸೀಸ್)