

ನವದೆಹಲಿ: 20,000 ಅಗ್ನಿವೀರ್‌ಗಳ ಎರಡನೇ ಬ್ಯಾಚ್ ಅಕ್ಟೋಬರ್ ಮೊದಲ ವಾರದಲ್ಲಿ ತೇರ್ಗಡೆಯಾಗಲಿದೆ ಎಂದು ವರದಿಯಾಗಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾದ ಮೊದಲ ಬ್ಯಾಚ್ ಅನ್ನು ಭಾರತದಾದ್ಯಂತ ವಿವಿಧ ಘಟಕಗಳಲ್ಲಿ ನಿಯೋಜಿಸಲಾಗಿದೆ.
ಈಗಾಗಲೇ ಆಗಸ್ಟ್ ತಿಂಗಳಿನಲ್ಲಿ ಮೊದಲ ಬ್ಯಾಚ್ ತೇರ್ಗಡೆಗೊಂಡಿತ್ತು. ಮೊದಲ ಬ್ಯಾಚ್ ಅನ್ನು ಶ್ಲಾಘಿಸುತ್ತಾ, ರಕ್ಷಣಾ ಮತ್ತು ಭದ್ರತಾ ಸಂಸ್ಥೆಯವರು ಮೊದಲ ಬ್ಯಾಚ್‌ನ ಕಾರ್ಯಕ್ರಮತೆಯನ್ನ ಹಾಡಿ ಹೊಗಳಿದ್ದಾರೆ.
2022 ರಲ್ಲಿ ಒಟ್ಟು 40,000 ಅಗ್ನಿವೀರ್‌ಗಳನ್ನು ಸೇನೆಗೆ ಸೇರ್ಪಡೆಯಾಗಿದ್ದು, ಎರಡು ಬ್ಯಾಚ್‌ಗಳಲ್ಲಿ ತರಬೇತಿಗಾಗಿ ವಿವಿಧ ರೆಜಿಮೆಂಟಲ್ ಕೇಂದ್ರಗಳಿಗೆ ಕಳುಹಿಸಲಾಯಿತು. ಕೊರೊನಾ ಸಂದರ್ಭದಲ್ಲಿ ಸುಮಾರು 3 ವರ್ಷಗಳ ಕಾಲ ಸಶಸ್ತ್ರ ಪಡೆಗಳ ನೇಮಕಾತಿ ನಡೆದಿರಲಿಲ್ಲ.
ಕಳೆದ ವರ್ಷ ಜೂನ್‌ನಲ್ಲಿ ಅಗ್ನಿಪಥ್ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳ ಅವಧಿಗೆ ಅಭ್ಯರ್ಥಿಗಳನ್ನು ಅಗ್ನಿವೀರ್‌ಗಳಾಗಿ ನೇಮಿಸಿಕೊಳ್ಳಲು ಸೇನೆಯು ಚಾಲನೆ ನೀಡಿತ್ತು. ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನ ಕಾರ್ಯಕ್ಷಮತೆ ಉತ್ತಮವಾಗಿದೆ.
ಈ ಯೋಜನೆಯು ಹೊಸದಾಗಿ ಅಗ್ನಿವೀರ್‌ಗಳಾಗಿ ನೇಮಕಾತಿಗಳನ್ನು ಪ್ರೇರೇಪಿಸಿದೆ ಮತ್ತು ತಾಂತ್ರಿಕ ಪರಿಣತಿಯ ಮಿತಿಯನ್ನು ಹೆಚ್ಚಿಸಿರೋದಾಗಿ ರಕ್ಷಣಾ ಮತ್ತು ಭದ್ರತಾ ಸಂಸ್ಥೆ ತಿಳಿಸಿದೆ.
ಅಗ್ನಿಪಥ್ ಯೋಜನೆಗೆ ಅರ್ಹರಾಗಲು ನಿಮ್ಮ ವಯಸ್ಸು 17 ವರ್ಷದಿಂದ 21 ವರ್ಷಗಳ ನಡುವೆ ಇರಬೇಕು. ಈ ನೇಮಕಾತಿಯಲ್ಲಿ ಸೇನೆಯಂತೆಯೇ ಅದೇ ಪ್ರಕ್ರಿಯೆಯಿಂದ ಆಯ್ಕೆ ಮಾಡಲಾಗುತ್ತದೆ. ಅಂದರೆ ಸೇನೆ ನಿಗದಿಪಡಿಸಿದ ನಿಯಮಗಳ ಪ್ರಕಾರವೇ ನೇಮಕಾತಿ ನಡೆಯಲಿದೆ. ಇದರಲ್ಲಿ ನೇಮಕಾತಿಯ ನಂತರ ತರಬೇತಿ ಅವಧಿ ಸೇರಿದಂತೆ ಒಟ್ಟು 4 ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ.