19 ವರ್ಷಗಳ ನಂತರ ಮತ್ತೊಮ್ಮೆ ಮಹೇಶ್​ ಬಾಬು ಜತೆ ಅಭಿನಯಿಸಲು ಮುಂದಾದ ನಟಿ

Untitled design - 2023-08-08T134050.712
Published on

ಆಂಧ್ರಪ್ರದೇಶ: ಟಾಲಿವುಡ್​​ನ ಪ್ರಿನ್ಸ್​ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ 'ಗುಂಟೂರ್ ಕಾರಂ' ಚಿತ್ರವು ಸದ್ಯ ಒಂದಲ್ಲ ಒಂದು ವಿಷಯದಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ 19 ವರ್ಷಗಳ ನಂತರ ಮತ್ತೊಮ್ಮೆ ತೆರೆಯ ಮೇಲೆ ಮಹೇಶ್ ಬಾಬು ಅವರೊಟ್ಟಿಗೆ ಕಾಣಿಸಿಕೊಳ್ಳುತ್ತಿರುವ ನಟಿ ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಲಭಿಸಿದೆ.

ಪ್ರಿನ್ಸ್​ ನಟನೆಯ ಆಕ್ಷನ್ ಜಾನರ್​ನ ಚಿತ್ರದಲ್ಲಿ ಮೀನಾಕ್ಷಿ ಚೌಧರಿ ಮತ್ತು ಶ್ರೀಲೀಲಾ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ವಿಶೇಷ ಪಾತ್ರದಲ್ಲಿ ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಖಚಿತವಾಗಿದೆ. ರಜನಿಕಾಂತ್​ ಅವರ 'ಜೈಲರ್' ಚಿತ್ರದಲ್ಲಿ ರಮ್ಯಾ ಅವರು ಅಭಿನಯಿಸಿದ್ದು, ಇದೀಗ ಮಹೇಶ್​ ಬಾಬು ಅವರೊಟ್ಟಿಗೆ 19 ವರ್ಷಗಳ ನಂತರ ಮತ್ತೊಮ್ಮೆ ಒಟ್ಟಿಗೆ ನಟಿಸಲಿರುವ ಸಂಗತಿ ಅಭಿಮಾನಿಗಳಿಗೆ ಸಂತಸ ತಂದಿದೆ.

ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪುನರಾರಂಭವಾಗಲಿದ್ದು, ಮಹೇಶ್ ಬಾಬು ಮತ್ತೆ ಸೆಟ್‌ಗೆ ಬರಲಿದ್ದಾರೆ. ಸಿನಿಮಾಗೆ ಥಮನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರವು ಜನವರಿ 13, 2024 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net