ರಾಹುಲ್​ ಗಾಂಧಿಯನ್ನು ಮದುವೆಯಾಗಲು ನಾನು ರೆಡಿ ಆದ್ರೆ ಒಂದು ಕಂಡೀಷನ್​ ಎಂದ ನಟಿ ಶೆರ್ಲಿನ್​ ಚೋಪ್ರಾ!

Sherlin Chopra
Published on

ಮುಂಬೈ: ತನ್ನ ಬೋಲ್ಡ್​ ಲುಕ್​ನಿಂದಲೇ ಬಾಲಿವುಡ್​ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟಿ ಹಾಗೂ ಮಾಡೆಲ್​ ಶೆರ್ಲಿನ್​ ಚೋಪ್ರಾ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿಚಾರಕ್ಕೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ.

ಅಭಿಮಾನಿಗಳು ಮತ್ತು ಪಾಪಾರಾಜಿಗಳ ಜತೆ ಶೆರ್ಲಿನ್​ ಆತ್ಮೀಯ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಒಂದು ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಮದುವೆ ಆಗುವ ಅವಕಾಶ ಸಿಕ್ಕರೆ ಆಗುತ್ತೀರಾ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದರು. ಇದಕ್ಕೆ ಅಚ್ಚರಿಯ ಉತ್ತರ ನೀಡಿದ ಶೆರ್ಲಿನ್​ ಒಂದು ಷರತ್ತನ್ನು ಸಹ ಹಾಕಿದರು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಮದುವೆಯಾಗುತ್ತೇನೆ

ಮುಂಬೈನ ಬಾಂದ್ರಾ ಬ್ಯಾಂಡ್​ಸ್ಟ್ಯಾಂಡ್​ನಲ್ಲಿ ಅಭಿಮಾನಿಗಳು ಹಾಗೂ ಪಾಪರಾಜಿಗಳ ಸೆಲ್ಫಿಗೆ ಪೋಸ್​ ನೀಡುವಾಗ ಶೆರ್ಲಿನ್​ಗೆ ಈ ಪ್ರಶ್ನೆ ಎದುರಾಯಿತು. ಹೌದು, ಯಾಕಾಗಬಾರದು. ಆದರೆ, ಮದುವೆಯಾದರೂ ನನ್ನ ಸರ್​ ನೇಮ್​ ಅನ್ನು ಉಳಿಸಿಕೊಳ್ಳಲು ಬಯಸುತ್ತೇನೆ ಎಂದರು. ರಾಹುಲ್​ ಅವರನ್ನು ಮದುವೆಯಾದರೂ ಚೋಪ್ರಾ ಅನ್ನೋ ಹೆಸರನ್ನು ಹಾಗೇ ಉಳಿಸಿಕೊಳ್ಳುತ್ತೇನೆ. ಅದರ ಬದಲು ಗಾಂಧಿ ಅಂತಾ ಬದಲಾಯಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಶೆರ್ಲಿನ್ ಅವರ ಈ ಕಾಮೆಂಟ್ ವ್ಯಾಪಕವಾಗಿ ಗಮನ ಸೆಳೆದಿದ್ದರೂ, ರಾಹುಲ್ ಗಾಂಧಿ ಮಾತ್ರ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಇತ್ತೀಚಿನ ಬೆಳವಣಿಗೆಯಲ್ಲಿ ಮೋದಿ ಉಪನಾಮ ಪ್ರಕರಣದಲ್ಲಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದ ರಾಹುಲ್​ ಅವರನ್ನು ಸುಪ್ರೀಂಕೋರ್ಟ್​ ಆದೇಶದಂತೆ ಕೇರಳದ ವಯನಾಡು ಕ್ಷೇತ್ರದ ಸಂಸದ ಸ್ಥಾನವನ್ನು ಮರುಸ್ಥಾಪಿಸಲಾಗಿದೆ.

ಅಂದಹಾಗೆ ನಟಿ ಶೆರ್ಲಿನ್, ದಿಟ್ಟ ಹೇಳಿಕೆಗಳನ್ನು ನೀಡುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತನ್ನ ನೈಜತೆಯನ್ನು ವ್ಯಕ್ತಪಡಿಸುವುದು ಹೊಸದೇನಲ್ಲ. ಕಳೆದ ತಿಂಗಳು, ಶೆರ್ಲಿನ್​ ಅವರು ಮುಂಬೈ ಮೂಲದ ಫೈನಾನ್ಸಿಯರ್ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. ವಿಡಿಯೋ ರೆಕಾರ್ಡಿಂಗ್‌ಗಾಗಿ ಹಣ ನೀಡುವ ನೆಪದಲ್ಲಿ ಫೈನಾನ್ಸಿಯರ್ ಕಿರುಕುಳ ನೀಡಿದ್ದಾನೆ ಎಂದು ಶೆರ್ಲಿನ್ ಆರೋಪಿಸಿದ್ದಾರೆ. ಆತನ ಮುಂಗಡ ಹಣವನ್ನು ನಿರಾಕರಿಸಿದ್ದಕ್ಕಾಗಿ ನನಗೆ ಬೆದರಿಕೆ ಮತ್ತು ಮೌಖಿಕ ನಿಂದನೆ ಮಾಡಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net