

ಕಂಕೇರ್: ದತ್ತು ಸ್ವೀಕಾರ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬಳು ಇಬ್ಬರು ಚಿಕ್ಕಮಕ್ಕಳನ್ನು ಮನಬಂದಂತೆ ಥಳಿಸಿ ನೆಲಕ್ಕೆ ಎಸೆದಿರುವ ಘಟನೆ ಛತ್ತಿಸ್ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ.
ಸೀಮಾ ದ್ವಿವೇದಿ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದು. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೃಶ್ಯದಲ್ಲೇನಿದೆ?
ಆರೋಪಿಯು ಚಿಕ್ಕ ಹುಡುಗಿಯನ್ನು ಹೊಡೆದು, ಕೂದಲಿನಿಂದ ಹಿಡಿದು ನೆಲಕ್ಕೆ ಎಸೆದಿದ್ದಾರೆ. ಇದರಿಂದಾಗಿ ಹುಡುಗಿ ಅಳಲು ಪ್ರಾರಂಭಿಸಿದ್ದು, ಸೀಮಾ ಹುಡುಗಿಯನ್ನು ಮತ್ತೊಮ್ಮೆ ಎತ್ತಿ ಹಾಸಿಗೆಯ ಮೇಲೆ ಎಸೆದು ಥಳಿಸಿದ್ದಾಳೆ. ಈ ಸಂದರ್ಭದಲ್ಲಿ ಇತರ ಸಿಬ್ಬಂದಿಗಳು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದರೂ ಅವರಿಬ್ಬರೂ ಮಧ್ಯಪ್ರವೇಶಿಸಿ ಮಗುವನ್ನು ರಕ್ಷಿಸಿಲ್ಲ.
ಈ ಕೃತ್ಯವು ಬೆಳಕಿಗೆ ಬಂದ ನಂತರ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಕಂಕೇರ್ ಜಿಲ್ಲಾಧಿಕಾರಿ ಡಾ.ಪ್ರಿಯಾಂಕಾ ಶುಕ್ಲಾ ಆಕೆಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶಿಸಿದ್ದಾರೆ.(ಏಜೆನ್ಸೀಸ್)