

ನವದೆಹಲಿ: ಈ “ಕೇರಿಂಗ್” ದಂಪತಿಗಳು ಉಕ್ರೇನಿಯನ್ ಅನಾಥಾಶ್ರಮದಿಂದ ಒಬ್ಬ ಹುಡುಗನನ್ನು ದತ್ತು ಪಡೆದಿದ್ದಾರೆ. ಆದರೆ ಆತನೇ ಅವರ ಕೊಲೆ ಮಾಡಿರುವುದು ದುರಂತವೇ ಸರಿ. ಈ ರೀತಿಯ ಘಟನೆ ಅಮೆರಿಕದಲ್ಲಿ ನಡೆದಿದ್ದು, ಈ ದಂಪತಿ ಸಹಾಯ ಮಾಡಿ ಕೆಟ್ಟಿದ್ದಾರೆ. ಮೃತರನ್ನು ಫ್ಲೋರಿಡಾದ ಉತ್ತರ ಬಂದರಿನ, ರಿಯಲ್ ಎಸ್ಟೇಟ್ ಏಜೆಂಟ್ ರಾಬಿ ಮತ್ತು ಜೆನ್ನಿಫರ್ ಟವರ್ ಎಂದು ಗುರುತಿಸಲಾಗಿದೆ.
ಇವರು ಏಳು ವರ್ಷಗಳ ಹಿಂದೆ 21 ವರ್ಷದ ಡಿಮಾ ಎನ್ನುವ ಹುಡುಗನನ್ನು ರಕ್ಷಿಸಿ ದತ್ತು ಪಡೆದಿದ್ದರು. ಆದರೆ ಅವರನ್ನು ಹತ್ಯೆ ಮಾಡಿರುವ ಆರೋಪಗಳನ್ನು ಡಿಮಾ ಎದುರಿಸುತ್ತಿದ್ದಾನೆ. ಜಗಳದ ಕರೆಗಳನ್ನು ಸ್ವೀಕರಿಸಿದ ಪೊಲೀಸರು ಘಟನಾ ಸ್ಥಳಕ್ಕೆ ಬಂದರು. ಈ ಸಂದರ್ಭ ರಾಬಿ ಮತ್ತು ಜೆನ್ನಿಫರ್ ಇರಿತಕ್ಕೊಳಗಾಗಿದ್ದು ಸಾವಿಗೀಡಾಗಿದ್ದರು. ಇಡೀ ಕೋಣೆ ರಕ್ತಮಯವಾಗಿತ್ತು.
“ಇವರಿಬ್ಬರು ನಿಜಕ್ಕೂ ಒಳ್ಳೆಯ ಜನರಾಗಿದ್ದರು” ಎಂದು ಮೃತ ರಾಬಿ ಟವರ್ ಅವರ ಚಿಕ್ಕಪ್ಪ ವಾರೆನ್ ರೈನ್ಸ್ ನ್ಯೂಯಾರ್ಕ್ ಪೋಸ್ಟ್ ಗೆ ತಿಳಿಸಿದ್ದಾರೆ. “ಊಈ ಸಾವಿಗೆ ಯಾವುದೇ ಅರ್ಥವಿಲ್ಲ. ಯಾರಿಗೂ ಡಿಮಾಗೆ ಇದ್ದ ದ್ವೇಷವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಡಿಮಾನ ಜೀವನದಲ್ಲಿ ಆ ದಂಪತಿ ಮಾತ್ರವೇ ಸಹಾಯ ಮಾಡಲು ಪ್ರಯತ್ನಿಸಿದ್ದು. ಅವರು ಆತನನ್ನು ತಮ್ಮ ಮಗನಂತೆ ಪರಿಗಣಿಸಿದ್ದರು” ಎಂದು ಅವರು ಹೇಳಿದ್ದಾರೆ.
ಡಿಮಾ ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಿ ಕುಡುಕ ತಂದೆ ಅವನನ್ನು ತ್ಯಜಿಸಿದ್ದರು. ನಂತರ ಡಿಮಾ ಹೇಗೋ ಅನಾಥಾಶ್ರಮ ತಲುಪಿದ್ದ. ಈ ದಂಪತಿ ಬಾಲಕನನ್ನು ದತ್ತು ತೆಗೆದುಕೊಂಡು ಉತ್ತಮ ಭವಿಷ್ಯ ನೀಡಲು ಪ್ರಯತ್ನಿಸಿದ್ದರು. ಆದರೆ ಈತ ಮಾತ್ರ ತನ್ನ ತಂದೆ ತಾಯಿಯನ್ನೇ ಕೊಲೆ ಮಾಡಿ ಅಲ್ಲಿಂದ ತೆರಳಿದ್ದಾನೆ.
ದಂಪತಿಗಳನ್ನು ಕೊಂದ ನಂತರ, ಡಿಮಾ ಕಾರಿನಲ್ಲಿ ತಪ್ಪಿಸಿಕೊಂಡು ಅಲ್ಲಿಂದ ತೆರಳಿದ್ದಾರೆ. ನಂತರ ಆತ ಕಾಲ್ನಡಿಗೆಯಲ್ಲೇ, ದಟ್ಟವಾದ ಕಾಡಿಗೆ ಪ್ರವೇಶಿಸಿದ. ಸುಮಾರು ಎಂಟು ಗಂಟೆಗಳ ಶೋಧದ ನಂತರ ಅಧಿಕಾರಿಗಳು ಅವನನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.
ವಾರೆನ್, “ಜೆನ್ನಿಫರ್ ಮತ್ತು ರಾಬಿ ತಮ್ಮದೇ ಮಕ್ಕಳನ್ನು ಹೊಂದಲು ಸಾಧ್ಯವಾದ ಕಾರಣ ಅವರು ಡಿಮಾವನ್ನು ದತ್ತು ಪಡೆದರು. ಅನಾಥಾಶ್ರಮದಲ್ಲಿ ಅವನು ಅವನ ಮೇಲೆ ಜತೆಗಿರುವ ಮಕ್ಕಳಿಂದ ಸಾಕಷ್ಟು ದಾಳಿಗಳು ಆಗಿದ್ದವು. ಈತನೊಂದಿಗೆ ಹೊರಗೆ ತಿನ್ನಲು ಹೊರಟಾಗ, ಬಾಲಕ ಆರು ಹಾಟ್ ಡಾಗ್‍ಗಳನ್ನು ತಿಂದಿದ್ದನಂತೆ. ಕಾರಣ, ಅನಾಥಾಶ್ರಮದಲ್ಲಿ ತಿನ್ನಲು ಸಾಕಷ್ಟು ಸಿಗುತ್ತಿರಲಿಲ್ಲ. ಈ ಅನಾಥಾಶ್ರಮಗಳು ಮಕ್ಕಳಿಗೆ ಜೈಲಿನಂತೆ. ”
ಪ್ರೀತಿ ಮತ್ತು ಕಾಳಜಿ ತೋರಿಸಿದರೆ ಹುಡುಗ ಡಿಮಾ ಹಿಂದಿನ ತನ್ನ ಆಘಾತವನ್ನು ಮರೆಯುತ್ತಾನೆ ಎಂದು ದಂಪತಿಗಳು ನಂಬಿದ್ದರು. ಆದರೆ ಡಿಮಾ ಮಾತ್ರ ತನ್ನ ಹೊಸ ಸುತ್ತಮುತ್ತಲಿನ ಹೊಸ ಸನ್ನಿವೇಶಗಳಿಗೆ ಒಗ್ಗಿಕೊಳ್ಳಲು ಹೆಣಗಾಡುತ್ತಿದ್ದನು. ಇದರಿಂದಾಗಿ ಆತ ಶಾಲೆಯಲ್ಲಿ ಜಗಳಕ್ಕೆ ಸಿಲುಕಿದ್ದನು” ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ, ಡಿಮಾಗೆ ಏನೇ ಸಮಸ್ಯೆ ಇದ್ದಿದ್ದರೂ ದಂಪತಿ ಕೊಲೆಯಾಗಿ ಹೋಗಿರುವುದು ದುರಂತವೇ ಸರಿ. (ಏಜೆನ್ಸೀಸ್)