ಕುರಿಮರಿ, ಮೇಕೆ, ಫುಲ್ ಬಾಟಲ್! ಇದೆಲ್ಲಾ ದಸರಾ ಆಫರ್​

Dasara
ಸಾಂದರ್ಭಿಕ ಚಿತ್ರ
Published on

ತೆಲಂಗಾಣ: ದಸರಾ ಹಬ್ಬ ( Dasara) ಬಂತೆಂದರೆ ವಾಣಿಜ್ಯ ಜಾಹೀರಾತುಗಳಲ್ಲಿ ಭರ್ಜರಿ ಆಫರ್ ಗಳು ಬರುವುದು ಸಾಮಾನ್ಯ. ಬಟ್ಟೆ ಮತ್ತು ಆಭರಣ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ಭಾರಿ ಬಂಪರ್ ಕೊಡುಗೆಗಳನ್ನು ಘೋಷಿಸುವುದನ್ನು ನಾವು ನೋಡುತ್ತೇವೆ.

ದಸರಾ ( Dasara)  ಬಂಪರ್ ಲಕ್ಕಿ ಚಾನ್ಸ್ ಪಟ್ಟೆಯಂಡಿ ಮಂಚಿರ್ಯಾಲ ಜಿಲ್ಲೆ ಸಿಂಗರೇಣಿ ಖಿಲ್ಲದ ಬೋಯಪಲ್ಲಿಯಲ್ಲಿ ಗ್ರಾಮಸ್ಥರು ಜಾಹೀರಾತು ಬಿಡುಗಡೆ ಮಾಡಿದರು. ಬೋಯಪಲ್ಲಿ ಜನತೆ ಹಬ್ಬಕ್ಕೆ ಉಡುಗೊರೆಗಳನ್ನು  ಅಭೂತಪೂರ್ವ ರೇಂಜ್ ನಲ್ಲಿ ಅನೌನ್ಸ್ ಮಾಡಿದ್ದಾರೆ. ಬೋಯಪಲ್ಲಿಯ ದಸರಾ ಧಮಾಕಾ ಆಫರ್ ಗಳೂ ಸಖತ್​​ ಸುದ್ದಿ  ಮಾಡುತ್ತಿವೆ.

ಬೋಯಪಲ್ಲಿ ತಮ್ಮ ದಸರಾ ಧಮಾಕಾ ಸಮಯದಲ್ಲಿ 100 ರೂ ಮೌಲ್ಯದ ಕೂಪನ್ ಅನ್ನು ತೆಗೆದುಕೊಂಡರೆ 10 ಆಕರ್ಷಕ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಮೊದಲ ಬಹುಮಾನವಾಗಿ ಕುರಿಮರಿ, ದ್ವಿತೀಯ ಬಹುಮಾನವಾಗಿ ಮೇಕೆ, ಮೂರನೇ ಬಹುಮಾನದಿಂದ ಆರನೇ ಬಹುಮಾನದವರೆಗೆ ಬ್ರಾಂಡೆಡ್ ಮಧ್ಯದ ಬಾಟಲಿಗಳನ್ನು ಗ್ರಾಮಸ್ಥರು ನೀಡುತ್ತಿದ್ದಾರೆ. ಏಳನೇ ಮತ್ತು ಎಂಟನೇ ಬಹುಮಾನವಾಗಿ ಹುಂಜ, ಒಂಬತ್ತು ಮತ್ತು ಹತ್ತನೇ ಬಹುಮಾನವಾಗಿ ನಾಟಿಕೋಳಿಯನ್ನು ನೀಡಲಾಗುತ್ತದೆ.

Dasara

ಲಕ್ಕಿ ಡ್ರಾದಲ್ಲಿ ಆಡು ಮತ್ತು ಟಗರುಗಳನ್ನು ಗೆಲ್ಲಲು ಮಧ್ಯ ಮತ್ತು ಔತಣಕೂಟಗಳಿಗೆ ಮದ್ಯ ಪ್ರಿಯರ ನೂಕುನುಗ್ಗಲು ಹೇಗೆ ಇರುತ್ತದೆ ಎಂದು ನೋಡೋಣ. ಬೋಯಪಲ್ಲಿ ಅವರ ದಸರಾ ಧಮಾಕಾ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net