

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಕ್ರೇಜ್ ಬಗ್ಗೆ ಹೇಳಬೇಕಾಗಿಲ್ಲ. ಶಾರುಖ್ ಖಾನ್ ಗೆ ಮೂವರು ಮಕ್ಕಳಿದ್ದಾರೆ. ಮಗಳು ಸುಹಾನಾ ಖಾನ್ ಈಗಾಗಲೇ ನಾಯಕಿಯಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಮಗ ಆರ್ಯನ್ ಖಾನ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಶಾರುಖ್ ಅವರ ಮೂರನೇ ಪುತ್ರ ಅಬ್ ರಾಮ್ (AbRam) ಬಗ್ಗೆ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.
ಶಾರುಖ್ ಗೆ ಸಂಬಂಧಿಸಿದ ಹಳೆಯ ಸಂದರ್ಶನವೊಂದು ಈಗ ವೈರಲ್ ಆಗಿದೆ. ಕೊನೆಯ ಮಗನಿಗೆ ಅಬ್ರಾಮ್ ಎಂದು ಏಕೆ ಹೆಸರಿಸಲಾಯಿತು ಎಂದು ಕಿಂಗ್ ಖಾನ್ ವಿವರಿಸಿದರು.
ಶಾರುಖ್ ಖಾನ್, ರಜತ್ ಶರ್ಮಾ ಅವರ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಗಳು ಶಾರುಖ್‌ಗೆ ಪ್ರಶ್ನೆಗಳನ್ನು ಕೇಳಿದರು. ಕೊನೆಯ ಮಗನಿಗೆ ಅಬ್ ರಾಮ್ ಎಂದು ಏಕೆ ಹೆಸರಿಸಲಾಯಿತು ಎಂದು ಅವರು ಕೇಳಿದರು.
ಶಾರುಖ್ ಖಾನ್ (Shah Rukh Khan) ಉತ್ತರಿಸಿದರು: ಇಸ್ಲಾಂ ಧರ್ಮದ ಹಜರತ್ ಇಬ್ರಾಹಿಂ ಅವರನ್ನು ಬೈಬಲ್‌ನಲ್ಲಿ ಅಬ್ರಹಾಂ ಮತ್ತು ಜುದಾಯಿಸಂನಲ್ಲಿ ಅಬ್ರಾಮ್ ಎಂದು ಕರೆಯಲಾಗುತ್ತದೆ. ನನ್ನ ಹೆಂಡತಿ ಹಿಂದೂ ಮತ್ತು ನಾನು ಮುಸ್ಲಿಂ. ಹಾಗಾಗಿ, ಅವರು ಮನೆಯಲ್ಲಿ ಜಾತ್ಯತೀತ ಭಾವನೆ ಹೊಂದಬೇಕೆಂದು ನಾನು ಬಯಸುತ್ತೇನೆ. ನಮ್ಮ ದೇಶದಲ್ಲಿ ಇರುವ ಸೌಹಾರ್ದತೆ ಇಲ್ಲಿಯೂ ಇದೆ ಎಂದು ನಂಬಿದ್ದೇನೆ' ಎಂದು ಶಾರುಖ್ ಹೇಳಿದ್ದಾರೆ.
ಶಾರುಖ್ ಪಠಾಣ್, ಜವಾನ್ ಮತ್ತು ಡುಂಕಿ ಚಿತ್ರದ ಮೂಲಕ ಸಖತ್ ಕಮ್ ಬ್ಯಾಕ್ ನೀಡಿದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹಿಟ್ ಆಗಿತ್ತು. ಇದು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಕಲೆಕ್ಷನ್ ಮಾಡಿದೆ.