

ತ್ಯಾಗರ್ತಿ: ಸಹಕಾರ ಸಂಘದ ನೇತೃತ್ವ ವಹಿಸಿದವರು ಜವಾಬ್ದಾರಿಯುತವಾಗಿ ಇರಬೇಕು. ರೈತರ ಏಳಿಗೆಗೆ ಯೋಜನೆ ರೂಪಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸದೃಢವಾಗಿದೆ. ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಬಾರಿ ರೈತರಿಗೆ ನೆರವಾಗಲು ಹೆಚ್ಚುವರಿ ಸಾಲ ಸೌಲಭ್ಯ ನೀಡಲಾಗುತ್ತದೆ. ಸಹಕಾರ ಸಂಘಗಳ ಉಳಿವಿಗಾಗಿ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ಸರ್ಕಾರದಿಂದ ಗ್ಯಾರಂಟಿ ಯೋಜನೆಗೆ ಆದ್ಯತೆ ನೀಡಲಾಗಿದೆ. ಅದನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಲಾಗುತ್ತಿದೆ. ಗೃಹಲಕ್ಷ್ಮಿ ಬಾಕಿ ಹಣ ಸದ್ಯದಲ್ಲೇ ಗ್ರಾಹಕರಿಗೆ ತಲುಪಲಿದೆ ಎಂದರು.
ಇ್ರೆೆ ಸಂಸ್ಥೆ ಸಹಕಾರ ಸಂಘಕ್ಕೆ ಉಚಿತವಾಗಿ ನೀಡಿರುವ ಡ್ರೋನ್ ತಂತ್ರಜ್ಞಾನ ಬಳಕೆಗೆ ಚಾಲನೆ ನೀಡಿದರು. ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಗೋಪಾಲಕೃಷ್ಣ ಬೇಳೂರು ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಂ.ಎಲ್.ಗಣಪತಿ, ಉಪಾಧ್ಯಕ್ಷ ಎನ್.ಎಚ್.ಮಂಜುನಾಥ, ಕಾರ್ಯದರ್ಶಿ ಜೈಕುಮಾರ್, ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕಪ್ಪ , ಸಂಘದ ನಿರ್ದೇಶಕರಾದ ಎಚ್.ಗಿರೀಶ್, ವೀರಪ್ಪ ಗೌಡ, ದೇವರಾಜಪ್ಪ, ಶ್ರೀನಿವಾಸ್, ಕೆ.ಬಿ.ಹೊಳಿಯಪ್ಪ, ಶಾಂತಮ್ಮ, ಮಂಜಪ್ಪ ಇತರರಿದ್ದರು.