ನಿವೇಶನಕ್ಕಾಗಿ ಜಾಗ ಕಾಯ್ದಿರಿಸಿ

ADC MANAVI
ಚಿಕ್ಕಮಗಳೂರಿನಲ್ಲಿ ಎಡಿಸಿ ನಾರಾಯಣ ಕನಕ ರಡ್ಡಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸುಂದ್ರೇಶ್, ರಘು, ಶಂಕರ್, ಮಂಜಪ್ಪ, ರಾಕೇಶ್, ಅಣ್ಣಪ್ಪ, ಶಾರದಾ, ಲಕ್ಷ್ಮೀ, ಮಂಜುಳಾ, ಪಲ್ಲವಿ ಇತರರಿದ್ದರು.
Published on

ಚಿಕ್ಕಮಗಳೂರು: ಸರ್ಕಾರಿ ಜಮೀನಿನಲ್ಲಿ ಸರ್ವೇ ನಡೆಸಿ ಅರ್ಹರಿಗೆ ನಿವೇಶನಕ್ಕಾಗಿ ಜಾಗ ಕಾಯ್ದಿರಿಸಬೇಕು ಎಂದು ಹೊಯ್ಸಳಲು, ಚಿನ್ನಿಗ, ಹೊಸಮನೆ, ಮರಬೈಲು ಹಾಗೂ ಅಣಜೂರು ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ನಾರಾಯಣ ಕನಕ ರಡ್ಡಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಸುಂದ್ರೇಶ್ ಮಾತನಾಡಿ, ಮೂಡಿಗೆರೆ ತಾಲೂಕಿನ ಜಿ.ಅಗ್ರಹಾರ ಗ್ರಾಮದ ಸರ್ವೇ ನಂ.67ರ ಸರ್ಕಾರಿ ಜಾಗದಲ್ಲಿ ಗ್ರಾಮಸ್ಥರು ಎರಡೂವರೆ ದಶಕಗಳ ಕಾಲ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ. ಪ್ರಸ್ತುತ ಪಡಿತರ ಚೀಟಿ, ಆಧಾರ್‌ಕಾರ್ಡ್ ಹಾಗೂ ವೋಟರ್ ಐಡಿ ಮಾತ್ರ ಅವಲಂಬಿಸಿ ಜೀವನ ನಡೆಸುತ್ತಿರುವ ನಿವಾಸಿಗಳಿಗೆ ಸೂಕ್ತ ನಿವೇಶನವಿಲ್ಲ. ಈ ಸಂಬಂಧ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಇದುವರೆಗೂ ಸರ್ಕಾರದಿಂದ ನಿವೇಶನ ಅಥವಾ ವಸತಿ ಸೌಲಭ್ಯ ಲಭ್ಯವಾಗಿಲ್ಲ. ವಾಸವಿರುವ ಜಿ.ಅಗ್ರಹಾರ ಗ್ರಾಮದ ಸರ್ಕಾರಿ ಜಮೀನನ್ನು ಸರ್ವೇ ನಡೆಸಿ 30*40 ಅಳತೆಯ ನಿವೇಶನಗಳನ್ನಾಗಿ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಜಾಗದಲ್ಲಿ ಸದ್ಯಕ್ಕೆ ಯಾವುದೇ ತಂಟೆ-ತಕರಾರು ಇರುವುದಿಲ್ಲ. ಹೀಗಾಗಿ ವಸತಿ ನಿರ್ಮಿಸಲು ನಿವೇಶನಕ್ಕೆ ಸರ್ವೇ ನಡೆಸಿ ಉಳಿಕೆ ಜಮೀನನ್ನು ಗೋಣಿಬೀಡು ಪಂಚಾಯಿತಿಗೆ ನಿವೇಶನಕ್ಕಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಛಲವಾದಿ ಸಂಘದ ಅಧ್ಯಕ್ಷ ರಘು, ಗ್ರಾಮಸ್ಥರಾದ ಶಂಕರ್, ಮಂಜಪ್ಪ, ರಾಕೇಶ್, ಅಣ್ಣಪ್ಪ, ಶಾರದಾ, ಲಕ್ಷ್ಮೀ, ಮಂಜುಳಾ, ಪಲ್ಲವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net