ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಏಷ್ಯಾದ ನಂ.1 ಶ್ರೀಮಂತ

Adani
Published on

ನವದೆಹಲಿ: ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಈಗ ಏಷ್ಯಾದ ನಂಬರ್ 1 ಶ್ರೀಮಂತ. ಬುಧವಾರದ ಮಾರುಕಟ್ಟೆ ವಹಿವಾಟಿನ ವೇಳೆ ಅದಾನಿ ಅವರ ನಿವ್ವಳ ಸಂಪತ್ತು ಏರಿಕೆಯಾಗಿದ್ದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿದ್ದಾರೆ. ಅದಾನಿ ಅವರ ನಿವ್ವಳ ಸಂಪತ್ತು 2020ರ ಏಪ್ರಿಲ್​ನಿಂದೀಚೆಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2020ರ ಮಾರ್ಚ್ 18ರಂದು ಅದಾನಿ ಸಂಪತ್ತು 4.91 ಶತಕೋಟಿ ಡಾಲರ್ ಇತ್ತು. ಕಳೆದ 20 ತಿಂಗಳಲ್ಲಿ ಅದಾನಿ ನಿವ್ವಳ ಸಂಪತ್ತಿನಲ್ಲಿ 1808% ಅಂದರೆ 83.89 ಶತಕೋಟಿ ಡಾಲರ್ ಏರಿಕೆಯಾಗಿದೆ.

ಇದೇ ಅವಧಿಯಲ್ಲಿ ಏಷ್ಯಾದ ಅತಿಶ್ರೀಮಂತ ಮುಕೇಶ್ ಅಂಬಾನಿ ಅವರ ನಿವ್ವಳ ಸಂಪತ್ತು 250% ಅಂದರೆ 54.7 ಶತಕೋಟಿ ಡಾಲರ್ ಏರಿಕೆಯಾಗಿತ್ತು. ಇದಕ್ಕೂ ಮುನ್ನ ಬ್ಲೂಮ್​ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ಅದಾನಿ ಅವರ ಪ್ರಸ್ತುತ ಸಂಪತ್ತು ಮುಕೇಶ್ ಅಂಬಾನಿ ಅವರ ಸಂಪತ್ತಿಗಿಂತ 2.2 ಶತಕೋಟಿ ಡಾಲರ್ ಕಡಿಮೆ ಅಂದರೆ 88.8 ಶತಕೋಟಿ ಡಾಲರ್ ಇದೆ ಎಂಬುದನ್ನು ತೋರಿಸಿತ್ತು. ಬುಧವಾರದ ವಹಿವಾಟಿನಲ್ಲಿ ಒ2ಸಿ ಡೀಲ್ ಕಾರಣ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಒತ್ತಡಕ್ಕೆ ಒಳಗಾಗಿತ್ತು. ಹೀಗಾಗಿ ಷೇರು ಮೌಲ್ಯ ಶೇಕಡ 1.07 ಕುಸಿದು 2,360.70 ರೂ.ನಲ್ಲಿ ವಹಿವಾಟು ನಡೆಸಿತ್ತು. ಗುರುವಾರ ಒ2ಸಿ ಡೀಲ್ ರದ್ದಾಗಿರುವ ಸುದ್ದಿ ಪ್ರಕಟವಾಗಿದೆ.

ಇದೇ ವೇಳೆ ಅದಾನಿ ಗ್ರೂಪ್ ಷೇರುಗಳು ಲಾಭದಲ್ಲಿ ವಹಿವಾಟು ನಡೆಸಿದ್ದವು. ಅದಾನಿ ಎಂಟರ್​ಪ್ರೖೆಸೆಸ್ ಷೇರುಮೌಲ್ಯ ಬುಧವಾರ ಶೇಕಡ 2.94 ಏರಿ 1757.70 ರೂಪಾಯಿ, ಅದಾನಿ ಪೋರ್ಟ್ಸ್ 764.75 ರೂ. (4.87%), ಅದಾನಿ ಟ್ರಾನ್ಸ್​ಮಿಷನ್ 1,950.75 ರೂ. (0.50%), ಅದಾನಿ ಪವರ್ 106.25ರೂ. (0.33%)ನಲ್ಲಿ ವಹಿವಾಟು ನಡೆಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net