ಸಿನಿಮಾಗಾಗಿ ಕಲಿತದ್ದು ನಟಿಗೆ ಅದೇ ಚಟವಾಗಿ ಕಾಡಿತ್ತು; ಇದು ನಟಿಯ ಡರ್ಟಿ ಸಿಕ್ರೇಟ್...​​

Vidya Balan
Published on

ಮುಂಬೈ: ಬಾಲಿವುಡ್​ ನಟಿ ವಿದ್ಯಾಬಾಲನ್​ ಅವರು ಸ್ಟಾರ್ ನಟಿಯರಲ್ಲಿ ಒಬ್ಬರು. ಈ ನಟಿ ಸಿನಿಮಾ ಪಾತ್ರಕ್ಕಾಗಿ ಸಿಗರೇಟ್ ಸೇಯುವುದು ಕಲಿತದ್ದು ನಂತ್ರ ಬಾಲಿವುಡ್ ನಟಿಯೊಬ್ಬರು ಚಟ ಹತ್ತಿಸಿಕೊಂಡುಬಿಟ್ಟಿದ್ದರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪಾಲ್ಗೊಂಡು ಕುತೂಹಲಕಾರಿ ಸಂಗತಿಯೊಂದನ್ನು ನಟಿ ಬಹಿರಂಗಪಡಿಸಿದ್ದಾರೆ.

ದಿವಂಗತ ನಟಿ ಸಿಲ್ಕ್ ಸ್ಮಿತಾ ಅವರ ಜೀವನಾಧಾರಿತ ಹಿಂದಿಯಲ್ಲಿ ‘ದಿ ಡರ್ಟಿ ಪಿಕ್ಚರ್’ ಸಿನಿಮಾ ತಯಾರಾಗಿದ್ದು ಗೊತ್ತೇ ಇದೆ. ದಿವಂಗತ ನಟಿ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಿದ್ದಾರೆ. ಆ ಪಾತ್ರದಲ್ಲಿ ನಟಿಸಲು ವಿದ್ಯಾ ಬಾಲನ್ ಸಿನಿಮಾದಲ್ಲಿ ಸಿಗರೇಟ್ ಸೇದಬೇಕಿತ್ತು. ಆದರೆ ಆ ಚಿತ್ರದ ಚಿತ್ರೀಕರಣದ ನಂತರವೂ ಆಕೆಗೆ ಸಿಗರೇಟ್ ಸೇದುವ ಅಭ್ಯಾಸವಾಯಿತು. ನಿಧಾನವಾಗಿ ಅವಳಿಗೆ ಸಿಗರೇಟಿನ ವಾಸನೆ ಇಷ್ಟವಾಗತೊಡಗಿತು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ವಿದ್ಯಾ ಬಾಲನ್, “ಡರ್ಟಿ ಪಿಕ್ಚರ್ ಮಾಡುವ ಮೊದಲು ನಾನು ಧೂಮಪಾನ ಮಾಡುತ್ತಿರಲಿಲ್ಲ. ನನಗೆ ಸಿಗರೇಟ್ ಸೇದುವುದು ಹೇಗೆಂದು ಗೊತ್ತಿತ್ತು ಆದರೆ, ಅದನ್ನು ಮುಟ್ಟಲೇ ಇಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಪಾತ್ರಗಳು ಮತ್ತು ಚಿತ್ರ ಸಹಜವಾಗಿ ಮೂಡಿಬರಲು ಕೆಲವು ಕೆಲಸಗಳನ್ನು ಮಾಡಬೇಕು. ಹಾಗಾಗಿಯೇ ಪಾತ್ರಕ್ಕಾಗಿ ಸಿಗರೇಟ್ ಸೇದಿದ್ದೇನೆ. ಜನರು ತಮ್ಮ ಮನಸ್ಸಿನಲ್ಲಿ ಏನನ್ನುತ್ತಾರೆ... ಸಿಗರೇಟು ಸೇದುವ ಹುಡುಗಿಯರ ಬಗ್ಗೆ ಅವರು ಯಾವ ರೀತಿಯ ಅಭಿಪ್ರಾಯವನ್ನು ರೂಪಿಸುತ್ತಾರೆ ಎಂಬುದು ನನಗೆ ತಿಳಿದಿದೆ. ಅದಕ್ಕೇ ಮೊದಮೊದಲು ಸಿಗರೇಟು ಹಿಡಿಯಲು ಭಯ ಅನ್ನಿಸುತ್ತಿತ್ತು. ಆದರೆ ಈಗ ಯಾರೂ ಮೊದಲಿನಂತೆ ತೀರ್ಪು ನೀಡುವುದಿಲ್ಲ. ಡರ್ಟಿ ಪಿಕ್ಚರ್ ಸಿನಿಮಾ ನನ್ನನ್ನು ಸಿಗರೇಟ್ ಸೇದುವ ಅಭ್ಯಾಸಕ್ಕೆ ಹತ್ತಿರವಾಗಿಸಿತು. ನಂತರ ನಾನು ದಿನಕ್ಕೆ 2 ರಿಂದ 3 ಸಿಗರೇಟ್ ಸೇದುತ್ತಿದ್ದೆ ಎಂದು ಅವರು ಹೇಳಿದರು.

ಇನ್ನೂ ಸಿಗರೇಟ್ ಸೇದುತ್ತಿದ್ದೀಯಾ? ಎಂಬ ಪ್ರಶ್ನೆಗೆ ವಿದ್ಯಾ ಮಾತನಾಡಿ, 'ಕ್ಯಾಮೆರಾ ಮುಂದೆ ಈ ಬಗ್ಗೆ ಮಾತನಾಡಬೇಕು ಅಂತ ಅನಿಸುತ್ತಿಲ್ಲ. ಆದರೆ ನನಗೆ ಸಿಗರೇಟ್ ಸೇದುವುದು ತುಂಬಾ ಇಷ್ಟ. ನಾನು ಸಿಗರೇಟ್ ವಾಸನೆಯನ್ನು ಪ್ರೀತಿಸುತ್ತೇನೆ. ಕಾಲೇಜಿನಲ್ಲಿಯೂ ನನಗೆ ಸಿಗರೇಟಿನ ವಾಸನೆ ತುಂಬಾ ಇಷ್ಟವಾಗಿತ್ತು. ಬಸ್ ನಿಲ್ದಾಣದಲ್ಲಿ ಧೂಮಪಾನಿಗಳ ಪಕ್ಕದಲ್ಲಿ ನಿಂತು ಸಿಗರೇಟಿನ ವಾಸನೆಯನ್ನು ಆನಂದಿಸುತ್ತಿದ್ದೇನು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net