ಇದನ್ನೆಲ್ಲ ನಾನು ಬೆಂಬಲಿಸಲ್ಲ! ಅಚ್ಚರಿ ಹೇಳಿಕೆ ನೀಡಿದ ನಟಿ ಸಮಂತಾ | Samantha

ವಿಜಯವಾಣಿ - 2025-05-06T202249.689
Published on

Samantha: ಒಂದಷ್ಟು ಸಮಯದಿಂದ ನಟನೆಯಿಂದ ದೂರ ಉಳಿದಿರುವ ತೆಲುಗು ನಟಿ ಸಮಂತಾ ರುತು ಪ್ರಭು, ಇದೀಗ ನಿರ್ಮಾಪಕಿ ಆಗಿ ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ನಟನೆ ಬಿಟ್ಟು ತಮ್ಮ ಉದ್ಯಮದಲ್ಲಿ ಸಖತ್ ಬಿಜಿಯಾಗಿರುವ ಸಮಂತಾ, ತಾವು ನಿರ್ಮಿಸಿದ ಚಿತ್ರವನ್ನು ತೆರೆಗೆ ತರಲು ಮುಂದಾಗಿದ್ದಾರೆ. ಈ ಕುರಿತು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಕೆಲವು ವಿಷಯಗಳಿಗೆ ಪ್ರತಿಕ್ರಿಯಿಸಿದರು.

ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವ ಸಮಂತಾ, ಇದೇ ಮೇ.9ರಂದು ನಿರ್ಮಾಪಕಿಯಾಗಿ 'ಶುಭಂ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. ಇಂದು (ಮೇ.06) ಚಿತ್ರದ ಪ್ರಚಾರದ ಭಾಗವಾಗಿ ಮಾತನಾಡಿದ ನಟಿ, ಮೂರು ವರ್ಷಗಳ ಹಿಂದೆ, ತೆನಾಲಿ ಸಂದೀಪ್ ಎಂಬ ಅಭಿಮಾನಿ ಬಾಪಟ್ಲಾ ಜಿಲ್ಲೆಯ ಅಲಪಾಡು ಗ್ರಾಮದಲ್ಲಿ ತನಗಾಗಿ ಕಟ್ಟಿದ ದೇಗುಲದ ವಿಷಯಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.

ಇತ್ತೀಚೆಗೆ, ಸಮಂತಾ ಅವರ ಜನ್ಮದಿನದಂದು ದೇಗುಲದಲ್ಲಿದ್ದ ಅವರ ಹಳೆಯ ಪ್ರತಿಮೆಯನ್ನು ಪಕ್ಕಕ್ಕೆ ಇರಿಸಿ, ಸಮಂತಾರ ಹೊಸ ಪ್ರತಿಮೆಯನ್ನು ಸ್ಥಾಪಿಸಿ, ಪೂಜಿಸಿದ್ದ. ಈ ಸುದ್ದಿ ಜಾಲತಾಣಗಳಲ್ಲಿ ವ್ಯಾಪಕವಾಗಿ ಸದ್ದು ಮಾಡಿತ್ತು. ಇದಕ್ಕೆ ಉತ್ತರಿಸಿದ ಸಮಂತಾ, "ಅಭಿಮಾನಿಯೊಬ್ಬರು ನನಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ ಎಂಬ ಸುದ್ದಿ ತಿಳಿದು ಭಾರೀ ಆಶ್ಚರ್ಯವಾಯಿತು. ಆತ ನನ್ನ ಮೇಲೆ ಅಷ್ಟೊಂದು ಪ್ರೀತಿ ಇಟ್ಟಿದ್ದಾರೆ ಅನ್ನೋದನ್ನು ಅರ್ಥೈಸಿಕೊಳ್ಳುವುದೇ ಕಷ್ಟವಾಯ್ತು. ಇದಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ಇದು ಅವರು ಪ್ರೀತಿ ತೋರಿಸುವ ವಿಧಾನ ಇರಬಹುದು. ಆದ್ರೆ, ನನಗಾಗಿ ದೇಗುಲ ಕಟ್ಟುವುದು, ಪೂಜೆ ಸಲ್ಲಿಸೋದನ್ನು ನಾನು ಬೆಂಬಲಿಸಲ್ಲ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net