

Virat Kohli: ಐಪಿಎಲ್ ಪ್ಲೇಆಫ್ ಪಂದ್ಯಗಳಿಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಹೀಗಿರುವಾಗಲೇ ಫ್ರಾಂಚೈಸಿ ನಡೆಸಿದ ಪಾಡ್ಕಾಸ್ಟ್ನಲ್ಲಿ ಭಾಗಿಯಾಗಿ ಹಲವು ರೋಚಕ ಸಂಗತಿಗಳನ್ನು ಹಂಚಿಕೊಂಡಿರುವ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್ನಲ್ಲಿ ತಾವು ಎದುರಿಸಿದ ಮೊದಲ ಪಾಕಿಸ್ತಾನ ಪಂದ್ಯ ಮತ್ತು ಆಗಿನ ಪರಿಸ್ಥಿತಿ ಕುರಿತು ತಮ್ಮ ಮನದಾಳದ ಮಾತನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಅದು 2009ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ. ಅಂದು ಪಾಕಿಸ್ತಾನ ಮತ್ತು ಭಾರತ ಪಂದ್ಯವಿತ್ತು. ಈ ಪಂದ್ಯದಲ್ಲಿ ಆಡಬೇಕಿದ್ದ ಯುವಿ (ಯುವರಾಜ್ ಸಿಂಗ್) ತಮ್ಮ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಅವರ ಜಾಗಕ್ಕೆ ಮ್ಯಾನೇಜ್ಮೆಂಟ್ ನನ್ನನ್ನು ಆಡಿಸಲು ಇಚ್ಛಿಸಿತು. ಇದಕ್ಕೂ ಮೊದಲೇ ನೀವು ನಿಮ್ಮ ಸೂಟ್ಕೇಸ್ ಮತ್ತು ಪಾಸ್ಪೋರ್ಟ್ನ ನಿಮ್ಮಲ್ಲೇ ಇಟ್ಟುಕೊಂಡಿರಿ. ಯಾವಾಗ ಅಗತ್ಯವಿದೆಯೋ ಹೇಳ್ತೀವಿ, ಹೊರಟು ಬನ್ನಿ ಎಂದಿದ್ದರು.
ಮ್ಯಾನೇಜ್ಮೆಂಟ್ ಹೇಳಿದಂತೆ ನಾನು ರೆಡಿಯಿದ್ದೆ. ಅವರು ಕರೆ ಮಾಡಿದಾಗ ನಾನು ಬೆಂಗಳೂರಿನಲ್ಲಿದ್ದೆ. ತಕ್ಷಣವೇ ಹೊರಟು ಬನ್ನಿ ಎಂದಾಗ ಹೆಚ್ಚು ಸಮಯ ವ್ಯರ್ಥ ಮಾಡದೆ ತೆರಳಿದೆ. ಅಲ್ಲಿಗೆ ಹೋದ ಬಳಿಕ ನಾನು ಆಡಿದ ಮೊದಲ ಪಂದ್ಯವೇ ಪಾಕಿಸ್ತಾನ ಎದುರು. ಆ ಪಂದ್ಯವೇ ನನ್ನ ಮೊದಲ ಪಾಕಿಸ್ತಾನ-ಭಾರತ ಮ್ಯಾಚ್. ನನಗೆ ನೆನಪಿರುವ ಪ್ರಕಾರ, ಬಹುಶಃ 16 ರನ್ ಗಳಿಸಿ ಔಟ್ ಆದೆ. ಆ ಪಂದ್ಯದಲ್ಲಿ 16 ರನ್ ಗಳಿಸಿದ್ದ ನಾನು, ಶಾಹಿದ್ ಅಫ್ರಿದಿ ಅವರ ಬೌಲಿಂಗ್ನಲ್ಲಿ ಸಿಕ್ಸ್ ಹೊಡೆಯಲು ಹೋಗಿ ಬೌಂಡರಿ ಲೈನ್ ಕ್ಯಾಚ್ ನೀಡಿದೆ. ಅಂತಿಮವಾಗಿ ನಾವು ಆ ಪಂದ್ಯ ಸೋತೆವು ಎಂದರು.
ಆ ಪಂದ್ಯದ ಕ್ಷಣಗಳು ನನಗೆ ಬಹಳ ಮುಖ್ಯವಾಗಿತ್ತು. ಪಂದ್ಯದ ಪೂರ ನನ್ನ ಹೃದಯ ಬಡಿತ ಜೋರಾಗಿಯೇ ಇತ್ತು. ಪಾಕಿಸ್ತಾನ ಎದುರು ಸೋತ ಬಳಿಕ ಭಾರೀ ಬೇಸರವಾಯ್ತು. ಆ ದಿನ ಬೆಳಗ್ಗಿನ ಜಾವ 5 ಗಂಟೆವರೆಗೂ ನಾನು ನಿದ್ರಿಸದೆ ಗೋಡೆಯ ಸೀಲಿಂಗ್ನ ನೋಡುತ್ತಲೇ ಕುಳಿತಿದ್ದೆ ಎಂದು ವಿರಾಟ್ ಹೇಳಿದ್ದಾರೆ,(ಏಜೆನ್ಸೀಸ್).