ಲಾಕ್ಡೌನ್ ಶುರುವಾದಾಗಿನಿಂದ ಒಂದಲ್ಲ ಒಂದು ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಗಿಣಿ ದ್ವಿವೇದಿ, ಇತ್ತೀಚೆಗಷ್ಟೇ ಬೆಂಗಳೂರು ಹೊರವಲಯದಲ್ಲಿನ 1000 ಕ್ಕೂ ಅಧಿಕ ಕುಟುಂಬಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಬೆಂಗಳೂರಿನ ಹೊರವಲಯದಲ್ಲಿ ವಾಸಿಸುತ್ತಿರುವ ಒಂದಷ್ಟು ನಿರಾಶ್ರಿತ ಕುಟುಂಬಗಳಿಗೆ ಫೈಬರ್ನಿಂದ ನಿರ್ಮಾಣಮಾಡಿದ ಶೌಚಾಲಯಗಳನ್ನು ವಿತರಿಸಿದ್ದರು. ಇದೀಗ ಪೌರಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಮನೆ ಬಳಿ ಕಸ ತೆರವು ಮಾಡಲು ಬಂದಿದ್ದ 10ಕ್ಕೂ ಅಧಿಕ ಪೌರಕಾರ್ಮಿಕರ ಜತೆ ಒಂದಷ್ಟು ಹೊತ್ತು ಸಮಯ ಕಳೆದಿರುವ ರಾಗಿಣಿ, ಟೀ, ಬನ್ ವಿತರಿಸಿ, ಉಭಯಕುಶಲೋಪರಿ ನಡೆಸಿದ್ದಾರೆ. ಆ ಮಾತುಕತೆಯ ಒಂದಷ್ಟು ಫೋಟೋಗಳು ಇಲ್ಲಿವೆ.