

ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್ವುಡ್ನಲ್ಲಿ ಖಾತೆತೆರೆದು ಪರಭಾಷೆಗಳಲ್ಲಿಯೇ ಮಿಂಚುತ್ತಿದ್ದಾರೆ. ಅದರಲ್ಲೂ ಟಾಲಿವುಡ್ಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇದೀಗ ರಶ್ಮಿಕಾ ನಟನೆಯ ಮೊದಲ ತಮಿಳು ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದ್ದೇವೆ ಎಂಬ ಸೂಚನೆ ನೀಡಿದೆ.
ಕಾರ್ತಿ ನಾಯಕನಾಗಿ ನಟಿಸಿರುವ ಸುಲ್ತಾನ್ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿದ್ದ ಚಿತ್ರತಂಡ, ಶೇ. 10 ಭಾಗದ ಕೆಲಸಗಳು ಮುಗಿದರೆ, ಸಿನಿಮಾ ಸಂಪೂರ್ಣ ತಯಾರಾದಂತೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ನಿರ್ಮಾಪಕ, ಎಸ್.ಪಿ ಪ್ರಭು, ‘ಚಿತ್ರದ ಶೇ. 90 ಭಾಗದ ಶೂಟಿಂಗ್ ಮುಗಿದಿದೆ. ಎಡಿಟಿಂಗ್ ಕೆಲಸಗಳೂ ಲಾಕ್ಡೌನ್ ಸಮಯದಲ್ಲಿಯೇ ಮುಗಿಸಿದ್ದೇವೆ. ನಮ್ಮ ಸಂಸ್ಥೆಯಿಂದ ನಿರ್ಮಾಣವಾದ ಹೆಚ್ಚು ಬಜೆಟ್ನ ಮನರಂಜನಾ ಸಿನಿಮಾಗಿರಲಿದೆ ಎಂದಿದ್ದಾರೆ. ಸದ್ಯ ಸಿನಿಮಾ ಬಿಡುಗಡೆ ಯಾವಾಗ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಿದ್ದಾರಂತೆ.