ನೀನು ಹೀಗೆ ಮಾಡ್ಬೇಡ, ಯಾರು ಒಪ್ಪಲ್ಲ ಅಂದ್ರು; ತಾಯಿ ಮಾತು ಕೇಳಿ ಕೆಟ್ಟರಾ ಮೀನಾ

Actress Meena
ನಟಿ ಮೀನಾ
Published on

ಬೆಂಗಳೂರು: ಬಹುಭಾಷಾ ನಟಿ ಮೀನಾ ಅನೇಕ ಸೂಪರ್ ಸ್ಟಾರ್​ಗಳ ಜತೆ ನಟಿಸಿದ್ದಾರೆ. ಬೋಲ್ಡ್, ಫ್ಯಾಮಿ ಸೆಂಟಿಮೆಂಟ್​ ಚಿತ್ರ ಹೀಗೆ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳ ಪ್ರೀತಿಸಿ ಸಂಪಾದಿಸಿದ ನಟಿ ಒಮ್ಮೆ ತಾಯಿ ಮಾತು ಕೇಳಿ ಅವಕಾಶ ಕಳೆದುಕೊಂಡಿದ್ದರು.

ರಜನಿಕಾಂತ್ ಅವರ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಿರ್ದೇಶಕರು ಮೀನಾಗೆ ಒಂದು ಪಾತ್ರವನ್ನು ನೀಡಿದರು. ಆದರೆ ಮೀನಾ ಅವರ ತಾಯಿ ಆ ಪಾತ್ರ ಮಾಡಬೇಡಿ ಎಂದಿದ್ದರು. ಆದರೆ ಪಾತ್ರವು ಇಂದೂ ಕೂಡಾ ಮರೆಯದ ಪಾತ್ರವಾಗಿ ಉಳಿದಿದೆ.

1999 ರಲ್ಲಿ ಬಿಡುಗಡೆಯಾದ ಪಡೆಯಪ್ಪ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಕೆ ಎಸ್ ರವಿಕುಮಾರ್ ನಿರ್ದೇಶನದ ಈ ಚಿತ್ರವು ತೆಲುಗಿನಲ್ಲಿ ನರಸಿಂಹ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಯಿತು. ತೆಲುಗಿನಲ್ಲೂ ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ರಜನಿಕಾಂತ್ ಗೆ ಜೋಡಿಯಾಗಿ ಸೌಂದರ್ಯ ಮತ್ತು ರಮ್ಯಾ ಕೃಷ್ಣ ನಟಿಸಿದ್ದರು. ರಮ್ಯಕೃಷ್ಣ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನ ವಿರುದ್ಧ ಕಾಣಿಸಿಕೊಳ್ಳುವ ಪಾತ್ರದಲ್ಲಿ ರಮ್ಯಾ ಕೃಷ್ಣ ಅದ್ಭುತವಾಗಿ ನಟಿಸಿದ್ದಾರೆ. ಈ ನೀಲಾಂಬರಿ ಪಾತ್ರವೇ ಚಿತ್ರದ ಹೈಲೈಟ್ ಆಗಿದ್ದು, ಈಗಲೂ ಆ ಪಾತ್ರದ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಈ ಪಾತ್ರವು ರಮ್ಯಾ ಕೃಷ್ಣನಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ಆದರೆ ಆರಂಭದಲ್ಲಿ ಈ ಪಾತ್ರಕ್ಕೆ ಮೀನಾ ಅವರನ್ನು ಪರಿಗಣಿಸಲಾಗಿತ್ತು. ಆದರೆ ಮೀನಾ ಅವರ ತಾಯಿ ಆಡಿದ ಓಮದು ಮಾತಿನಿಂದ ಈ ಸಿನಿಮಾ ಮೀನಾ ಅವರ ಕೈ ತಪ್ಪಿ ಹೋಗಿತ್ತು ಎನ್ನಲಾಗಿದೆ.

ಮೀನಾ ನಿನಗೆ ಆ ಪಾತ್ರ ಸೆಟ್ ಆಗಲ್ಲ, ಮಾಡಬೇಡ. ಮೀನಾ ಹೋಮ್ಲಿ ಹೀರೋಯಿನ್ ಪಾತ್ರದಲ್ಲಿ ನಟಿಸುತ್ತಿದ್ದು, ನೆಗೆಟಿವ್ ಶೇಡ್ ಇರುವ ಪಾತ್ರ ಮಾಡುವುದು ಸರಿಯಲ್ಲ. ಮೀನಾ ರಜನಿಕಾಂತ್ ಜತೆ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಅವರನ್ನು ವಿಲನ್ ಆಗಿ ಪ್ರೇಕ್ಷಕರು ಒಪ್ಪಿಕೊಳ್ಳುವುದಿಲ್ಲ ಎಂದು ಮೀನಾ ತಾಯಿ ಸಲಹೆ ನೀಡಿದ್ದರು.

ತಾಯಿ ಹೇಳಿದಂತೆ ಮೀನಾ ಈ ಸಿನಿಮಾ ಕೈ ಬಿಟ್ಟರು. ಮೀನಾ ಬಿಟ್ಟ ಪಾತ್ರವನ್ನು ರಮ್ಯಾ ಕೃಷ್ಣ ಮಾಡಿ ಸೈ ಎನಿಸಿಕೊಂಡರು. ಆದ್ರೆ ಹೈಲೆಟ್​ ಆಗಿದ್ದು ಮಾತ್ರ ಮೀನಾ ಅವರು ಕೈ ಬಿಟ್ಟ ಪಾತ್ರವನ್ನು ಮಾಡಿದ್ದ ರಮ್ಯಾ ಕೃಷ್ಣ. ಮೀನಾ ಅವರ ತಾಯಿಯಿಂದಾಗಿ ನರಸಿಂಹ ಚಿತ್ರದಲ್ಲಿ ನೀಲಾಂಬರಿ ಪಾತ್ರದಲ್ಲಿ ನಟಿಸುವ ಅವಕಾಶ ಕೈತಪ್ಪಿತು. ಹಾಗೆಯೇ ನಾಗಾರ್ಜುನ-ಕೃಷ್ಣವಂಶಿ ಕಾಂಬಿನೇಷನ್ ನಲ್ಲಿ ಬಂದಿದ್ದ ನಿನ್ನೇ ಪೆಲ್ಲದಾಟ ಚಿತ್ರದಲ್ಲಿ ಮೀನಾ ನಾಯಕಿಯಾಗಿ ನಟಿಸಬೇಕಿತ್ತು. ದಿನಾಂಕಗಳು ಲಭ್ಯವಿಲ್ಲದಿದ್ದಾಗ ಆಫರ್ ಅನ್ನು ಕೈಬಿಡಲಾಯಿತು. ಆದರೆ ಈ ಸಿನಿಮಾ ಸೂಪರ್ ಹಿಟ್ ಆಯ್ತು.

ಮೀನಾ ರಜನಿಕಾಂತ್, ವೆಂಕಟೇಶ್ ಮತ್ತು ಮೋಹನ್ ಲಾಲ್ ಅವರ ಜತೆ ಮೀನಾ ನಟಿಸಿದ್ದಾರೆ. 2009 ರಲ್ಲಿ ಮೀನಾ ವಿದ್ಯಾಸಾಗರ್ ಎಂಬ ವ್ಯಕ್ತಿಯನ್ನು ವಿವಾಹವಾದರು. ಅವರಿಗೆ ಒಂದು ಮಗುವಿದೆ. ಮೀನಾ ಅವರ ಪತಿ 2022 ರಲ್ಲಿ ನಿಧನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net