ತನ್ನ ಡ್ರೆಸ್ಸಿಂಗ್ ಬಗ್ಗೆ ಕೇಳಿದ ಸಂದರ್ಶಕನ ನೀರಿಳಿಸಿದ ನಟಿ ಮಂಚು ಲಕ್ಷ್ಮಿ; ಇದೇ ಮಾತನ್ನು ಮಹೇಶ್​ ಬಾಬುಗೆ ಕೇಳ್ತೀರಾ....!; ವಿಡಿಯೋ ವೈರಲ್| Manchu Lakshmi

Untitled design (54)
Published on

Manchu Lakshmi: ತೆಲುಗು ಚಿತ್ರರಂಗದಲ್ಲಿ ನಟಿ ಮಂಚು ಲಕ್ಷ್ಮಿ ಗೊತ್ತಿಲ್ಲದವರು ಯಾರೂ ಇಲ್ಲ. ಹಿರಿಯ ನಟ ಮೋಹನ್ ಬಾಬು ಪುತ್ರಿ. ಅವರ ಅಮೆರಿಕನ್ ಇಂಗ್ಲೀಷ್​ ಶೈಲಿಯ ಮಾತಿನಿಂದ ಅನೇಕ ಬಾರಿ ಟ್ರೋಲ್, ಖ್ಯಾತಿಯನ್ನು ಗಳಿಸಿದ್ದಾರೆ. ಈ ನಡುವೆ ಅವರ ಮುಂದಿನ ಚಿತ್ರವೊಂದರ ಪ್ರಮೋಷನ್​ ವೇಳೆ ಸಂದರ್ಶನದಲ್ಲಿ ಡ್ರೆಸ್ಸಿಂಗ್​ ಬಗ್ಗೆ ಕೇಳಿದ ಸಂದರ್ಶಕನನ್ನು ನೀರಿಳಿಸಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುಟ್ಯೂಬ್ ಸಂದರ್ಶಕನೊಬ್ಬ ಮಂಚು ಲಕ್ಷ್ಮಿಯವರಿಗೆ, ನೀವು ಮುಂಬೈಗೆ ಹೋದ ನಂತರ ನಿಮ್ಮ ಡ್ರೆಸ್ಸಿಂಗ್ ಶೈಲಿ ಬದಲಾಗಿದೆ. ನೀವಿಗ 50 ವರ್ಷ  ಸಮೀಪಿಸುತ್ತಿರುವ ವಯಸ್ಸಿನ ಮಹಿಳೆ, 12 ವರ್ಷದ ಮಗಳಿದ್ದಾಳೆ. ನೀವು ಇಷ್ಟು ಕಡಿಮೆ ಬಟ್ಟೆ ಧರಿಸಿದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ರೆ ಜನರು ಏನು ಯೋಚಿಸುತ್ತಾರೆ ಗೊತ್ತಾ? ಎಂದು ಪ್ರಶ್ನಿಸಿದ್ದಾನೆ.

ತಕ್ಷಣ ಈ ಪ್ರಶ್ನೆಗೆ ತೀಕ್ಷ್ಯವಾಗಿ ಉತ್ತರಿಸಿರುವ ಮಂಚು ಲಕ್ಷ್ಮಿ, ನೀವು ಇದೇ ಪ್ರಶ್ನೆಯನ್ನು ಒಬ್ಬ ಪುರುಷನಿಗೆ ಕೇಳುತ್ತೀರಾ? ನಿಮಗೆ ಆ ಧೈರ್ಯವಿದೆಯೇ? ನಿಮಗೆ 50 ವರ್ಷ ಶರ್ಟ್ ಹಾಕದೇ ಯಾಕೆ ತಿರುಗಾಡುತ್ತಿದ್ದೀರಾ? ಎಂದು ಮಹೇಶ್ ಬಾಬು ಅವರನ್ನು ಕೇಳಲು ಆಗುತ್ತಾ? ನೀವು ಹೇಗೆ ಮಹಿಳೆಗೆ ಮಾತ್ರ ಇಂತಹ ಪ್ರಶ್ನೆಗಳನ್ನು ಕೇಳ್ತೀರಾ?, ನಿಮ್ಮನ್ನು ನೋಡಿ ಜನ ಇಂತಹ ಪ್ರಶ್ನೆಗಳನ್ನು ಕೇಳೋದನ್ನು ಕಲಿಯುತ್ತಾರೆ. ಪತ್ರಕರ್ತರಾಗಿ ನೀವು ಹೆಚ್ಚು ಜವಾಬ್ದಾರಿಯುತರಾಗಿರಬೇಕು ಎಂದು ಸಂದರ್ಶಕನ ನೀರಿಳಿಸಿದ್ದಾರೆ.

ಪುರುಷ ನಟನಿಗೆ ತಾನು ಇದೇ ರೀತಿಯ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ ಎಂದು ಒಪ್ಪಿಕೊಂಡ ಸಂದರ್ಶಕ, ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಅದರ ಬಗ್ಗೆ ಕಾಮೆಂಟ್ ಮಾಡುತ್ತಿದ್ದರಿಂದ ಮಾತ್ರ ಕೇಳಿದೆ ಎಂದು ತನ್ನನ್ನು ಸಮರ್ಥಿಸಿಕೊಳ್ಳುತ್ತಾನೆ.

ಈ ವೇಳೆ ತನ್ನ ಮಾತು ಇನ್ನು ಮುಗಿದಿಲ್ಲ ಎಂದು ಹೇಳುವ ಲಕ್ಷ್ಮಿ, ವಿಚ್ಛೇದನದ ನಂತರ ವೃತ್ತಿಜೀವನ ಸಂಕಷ್ಟಕ್ಕೆ ಸಿಲುಕಿದ ಒಬ್ಬ ಸೂಪರ್‌ಸ್ಟಾರ್‌ನ ಪತ್ನಿಯನ್ನು ನಾನು ನೋಡಿದ್ದೇನೆ. ಅವಳು ಒಳ್ಳೆಯ ಕೆಲಸ ಮಾಡಲು ಕಾಯುತ್ತಿದ್ದಾಳೆ. ತನ್ನ ಮಾಜಿ ಪತಿಯ ಕಾರಣದಿಂದ ಸಿನಿಮಾ ಆಫರ್‌ಗಳನ್ನು ಸಹ ಒಪ್ಪಿಕೊಳ್ಳಲಾರದ ಸ್ಥಿತಿ ಇದೆ. ನಟನಿಗೆ ಅಂತಹ ಸನ್ನಿವೇಶ ಎಂದಿಗೂ ಎದುರಾಗುವುದಿಲ್ಲ. ಅವನ ಜೀವನ ಎಂದಿಗೂ ಬದಲಾಗುವುದಿಲ್ಲ. ಯಾರೂ ನಮಗೆ ಸ್ವಾತಂತ್ರ್ಯ ಕೊಡುವುದಿಲ್ಲ, ನಾವೇ ಅದನ್ನು ತೆಗೆದುಕೊಳ್ಳಬೇಕು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net