Actress Manasi: ಆ ಪಾತ್ರದ ಬಳಿಕ ಎಲ್ಲರೂ 'ಸೋದರಿ'ಯಾಗು ಎಂದ್ರು! ರಾಷ್ಟ್ರ ಪ್ರಶಸ್ತಿ ವಿಜೇತೆ ಅಳಲು!

manasi
Published on

ಮುಂಬೈ: ನಟಿ ಮಾನಸಿ ಪರೇಖ್(Actress Manasi) ಗುಜರಾತಿ ಚಿತ್ರ 'ಕಚ್ ಎಕ್ಸ್‌ಪ್ರೆಸ್ ' ನಲ್ಲಿನ ಅಭಿನಯಕ್ಕಾಗಿ 70 ನೇ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದರು. ಇತ್ತೀಚೆಗೆ ಸಂದರ್ಶನದಲ್ಲಿ ತನ್ನ ವೃತ್ತಿಜೀವನದ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದು, ತನ್ನ ಕಠಿಣ ಪರಿಶ್ರಮವೇ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಹೇಳಿದ್ದಾರೆ.

ನಾನು ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಮೂರು ಜೊತೆ ಬಟ್ಟೆಯೊಂದಿಗೆ ಮನೆಯಿಂದ ಆಡಿಷನ್ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದೆ. ಕೆಲವೊಮ್ಮೆ ಒಂದು ಪಾತ್ರಕ್ಕಾಗಿ 150 ಜನರು ಸಾಲಿನಲ್ಲಿರುತ್ತಿದ್ದರು. ಎಷ್ಟೇ ಕಷ್ಟ ಬಂದರೂ ಆಡಿಷನ್ ಮುಗಿಸಿ ಮನೆಗೆ ಹೋಗುತ್ತಿದ್ದೆ. ನಾನು ತೊಂದರೆಗಳನ್ನು ಎದುರಿಸಿ ಮುಂದೆ ಬರಲು ನಿರ್ಧರಿಸಿದೆ. ಏಕೆಂದರೆ ನಮ್ಮ ಹೋರಾಟ ನಾವು ಯಾರೆಂಬುದನ್ನು ನಿರ್ಧರಿಸುತ್ತದೆ ಎಂದು ನಂಬಿದವಳು ನಾನು ಎಂದು ತಿಳಿಸಿದ್ದಾಳೆ.

ನಾನು ಕಷ್ಟಪಟ್ಟು ಹೋರಾಡಿದ್ದರಿಂದ ಈ ಮಟ್ಟಕ್ಕೆ ಬಂದಿದ್ದೇನೆ ಎಂದು ನಂಬಿದ್ದೇನೆ. ಕಷ್ಟದ ನಂತರ ಸಿಗುವ ಯಶಸ್ಸಿನ ಆನಂದವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದೊಂದು ಮಧುರವಾದ ಭಾವ. ಆಗ ಮಾತ್ರ ನಾವು ಪ್ರತಿ ಕ್ಷಣವನ್ನು ಆನಂದಿಸಬಹುದು. ನಮ್ಮ ಮೇಲೆ ನಂಬಿಕೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದ್ದಾರೆ.

ಇನ್ನು ಬಾಲಿವುಡ್ ಬಗ್ಗೆ ಮಾತನಾಡಿರುವ ಮಾನಸಿ, ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದಲ್ಲಿ ವಿಕ್ಕಿ ಕೌಶಲ್ ಅವರ ಸಹೋದರಿಯಾಗಿ ನಟಿಸಿದ ನಂತರ, ಎಲ್ಲರೂ ಸಹೋದರಿಯ ಪಾತ್ರಗಳಿಗಾಗಿ ನನ್ನನ್ನು ಸಂಪರ್ಕಿಸಿದರು. ಹೀಗಾಗಿಯೇ ಬಾಲಿವುಡ್‌ನಲ್ಲಿ ಆಸಕ್ತಿ ಕಳೆದುಕೊಂಡೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net