ಶಾರೂಖ್​​ ಖಾನ್​​ 'ಪಠಾಣ್' ಚಿತ್ರದ ಅಸಲಿ ಬಾಕ್ಸ್​​ ಆಫೀಸ್​ ಕಲೆಕ್ಷನ್​​ ಬಹಿರಂಗಪಡಿಸಲಿ: ನಟಿ ಕಾಜೋಲ್​​

Untitled design (48)
Published on

ಮುಂಬೈ: ಪಠಾಣ್ ಚಿತ್ರದ ಅಸಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಶಾರೂಖ್ ಖಾನ್​ ಅವರು ಬಹಿರಂಗಪಡಿಸಲಿ ಎಂದು ನಟಿ ಕಾಜೋಲ್​ ನೀಡಿದ ಹೇಳಿಕೆಗೆ ಇದೀಗ ಎಸ್​ಆರ್​ಕೆ ಅಭಿಮಾನಿಗಳು ಟ್ರೋಲ್ ಮಾಡುವ ಮೂಲಕ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಭಾಗಿಯಾಗಿದ್ದ ಬಾಲಿವುಡ್​​ ಹಿರಿಯ ನಟಿ ಕಾಜೋಲ್​ ಅವರಿಗೆ ನಿರೂಪಕ, ಶಾರುಖ್ ಖಾನ್ ಅವರಿಗೆ ಏನಾದರೂ ಕೇಳಲು ಬಯಸುತ್ತೀರ? ಎಂದು ಕೇಳಿದಕ್ಕೆ, ಸ್ವಲ್ಪ ಸಮಯದವರೆಗೆ ಯೋಚಿಸಿ ಬಳಿಕ ಉತ್ತರಿಸಿದ ಅವರು, "ನಾನು ಶಾರೂಖ್ ಖಾನ್​ ಅವರಿಗೆ ಪಠಾಣ್ ಚಿತ್ರದ ಅಸಲಿ ಬಾಕ್ಸ್​​ ಆಫೀಸ್​​ ಗಳಿಕೆ ಎಷ್ಟು" ಎಂಬುದನ್ನು ಕೇಳಲು ಬಯಸುತ್ತೇನೆ ಎಂದು ಹೇಳಿದರು.

ಸಂದರ್ಶನದ ತುಣುಕು ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಮತ್ತು ಶಾರೂಖ್ ಅಭಿಮಾನಿಗಳು, ನಟಿ ಕಾಜೋಲ್​ ವಿರುದ್ಧ ಕೆಂಡಾಮಂಡಲಗೊಂಡಿದ್ದಾರೆ. ಕೆಲವರು ಕಾಜೋಲ್​​ ಹೇಳಿಕೆಗೆ, "ಇದು ಸ್ಮಾರ್ಟ್ ಉತ್ತರ" ಎಂದು ಕಮೆಂಟ್​ ಮಾಡಿದ್ದಾರೆ. ನೆಟ್ಟಿಗರೊಬ್ಬರು ಶಾರೂಖ್ ಖಾನ್ ಇಲ್ಲದೆ ನೀವೇನು ಅಲ್ಲ, ಎಸ್​​ಆರ್​​ಕೆ ಇಂಥವರಿಂದ ದೂರವಿರಬೇಕು" ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net