ಬಿಗ್​ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ

jayashree-ramaiah_154953053890 (1)
Published on

ಬೆಂಗಳೂರು: ಬಿಗ್​ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವೃದ್ಧಾಶ್ರಮವೊಂದರಲ್ಲಿ ನೇಣುಬಿಗಿದುಕೊಂಡು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಬಿಗ್​ಬಾಸ್​ ಸೀಸನ್​ 3ರ ಸ್ಪರ್ಧಿಯಾಗಿದ್ದ ಜಯಶ್ರೀ, ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು. ಉಪ್ಪು ಹುಳಿ ಖಾರ ಮತ್ತು ಶಿರಾಡಿ ಘಾಟ್ ಚಿತ್ರದಲ್ಲಿ ಜಯಶ್ರೀ ನಟಿಸಿದ್ದರು.

2020ರ ಜುಲೈ ತಿಂಗಳಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ಜಯಶ್ರೀ, 2019ರ ಸೆಪ್ಟೆಂಬರ್​ನಲ್ಲಿ ತನ್ನ ಸೋದರ ಮಾವನ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. 'ಮೊದಲಿನಿಂದಲೂ ನನಗೆ ನಮ್ಮ ಮಾವ ಕಿರುಕುಳ ಕೊಡುತ್ತಿದ್ದರು. ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದರು. ನಮ್ಮ ಮಾವ​ ಒಬ್ಬ ಸೈಕೋ. ಆಸ್ತಿ ವಿಚಾರಕ್ಕೆ ನಮ್ಮನ್ನು ಮನೆಯಿಂದ ಮಾವ ಹೊರಹಾಕಿದ್ದಾರೆ' ಎಂದು ಮಾವ ಗಿರೀಶ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದಕ್ಕೂ ಮುನ್ನಾ, ಸ್ವತಃ ಜಯಶ್ರೀ ಅವರೇ ಫೇಸ್​ಬುಕ್​ನಲ್ಲಿ, ‘ನನ್ನಿಂದಾಗದು, ಇಡೀ ಜಗತ್ತಿಗೆ ಮತ್ತು ಖಿನ್ನತೆಗೆ ಗುಡ್​ಬೈ’ ಎಂದು ಬರೆದುಕೊಂಡಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ, ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಕೆಲ ದಿನಗಳಿಂದ ಇದ್ದರು. ಇದೀಗ ನೇಣಿಗೆ ಶರಣಾಗಿ ಬದುಕಿಗೆ ಗುಡ್​ಬೈ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net