ಅಪ್ಪು​ ಜತೆ "ವೀರ ಕನ್ನಡಿಗ" ಸಿನಿಮಾದಲ್ಲಿ ನಟಿಸಿದ್ದ ನಟಿ ಈಗ ಹೇಗಿದ್ದಾರೆ ನೋಡಿ…..

Hassanandani
Published on

ಬೆಂಗಳೂರು:  ಸ್ಯಾಂಡಲ್​ವುಡ್​​ ನಟ ಪುನೀತ್​ ರಾಜ್​ಕುಮಾರ್​ ನಟನೆಯ " ವೀರ ಕನ್ನಡಿಗ ಸಿನಿಮಾ" ಮೂಲಕವಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿರುವ ನಟಿ ಅನಿತಾ ಹಸ್ಸಂದಾನಿ. ಪರಭಾಷೆಯಲ್ಲಿ ಮಿಂಚುತ್ತಿದ್ದ ಈಕೆ ಬೆರೆಳೆಣಿಕೆಯಷ್ಟು ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ. ಆದ್ರೆ ಇವರನ್ನು ಕನ್ನಡಿಗರು ಇನ್ನು ಮರೆತಿಲ್ಲ. ಇವರು ಕಾಣಿಸಿಕೊಂಡಿರುವ ಪಾತ್ರಗಳು ಫ್ಯಾನ್ಸ್​ಗೆ ಅಷ್ಟೆ ಹತ್ತಿರವಾಗಿದ್ದಾರೆ.  ಈ ನಟಿ ಈಗ ಹೇಗಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಈ ಸ್ಟೋರಿಯಲ್ಲಿದೆ...

ರೂಪದರ್ಶಿಯಾಗಿ ವೃತ್ತಿ ಬದುಕನ್ನು ಆರಂಭಿಸಿದ್ದ ಅನಿತಾ ಹಸ್ಸನಂದನಿ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಟಲಿಟ್ಟು, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಮಿಂಚಿದ ನಟಿ ಅನಿತಾ ಹಸ್ಸಂದಾನಿ. ಕನ್ನಡದಲ್ಲೂ ಪುನೀತ್​ ರಾಜ್​ಕುಮಾರ್​ ಅವರ ಜೊತೆ ವೀರ ಕನ್ನಡಿಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜ್​ ಕುಮಾರ್​ ಅವರ ಜತೆ ಗಂಡುಗಲಿ ಕುಮಾರರಾಮ ಸಿನಿಮಾ ಹಾಗೂ  ಧ್ಯಾನ್​ ಜೊತೆ ಸಹ ಇಂದ್ರಜಿತ್​ ಲಂಕೇಶ್​ ಅವರ ಹುಡುಗ ಹುಡುಗಿ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದಾರೆ.

ತೆಲುಗಿನಲ್ಲಿ ನುವ್ವುವೇನು ಸಿನಿಮಾದ ಮೂಲಕ ದಕ್ಷಿಣ ಭಾರತದ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟವರು ಅನಿತಾ. ಹಿಂದಿಯಲ್ಲಿ ಕಿರುತೆರೆ ಮೂಲಕ ಅಭಿನಯ ಆರಂಭಿಸಿದ ಅನಿತಾ ಮೊದಲು ನುವ್ವುನೇನು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ತೆಲುಗಿನ ನಂತರ ತಮಿಳಿ ಹಾಗೂ ಕನ್ನಡದಲ್ಲೂ ಅಭಿನಯಿಸಿದ್ದಾರೆ.

ಪ್ರಸ್ತುತ ಅನಿತಾ ಈಗ ಬಾಲಿವುಡ್ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಅನಿತಾ ಹಸ್ಸನಂದನಿ 2016ಕ್ಕೆ ಬೆಳ್ಳಿಪರದೆಯಿಂದ ದೂರ ಸರಿದ ಅನಿತಾ 2013ರಲ್ಲೇ ಉದ್ಯಮಿ ರೋಹಿತ್ ರೆಡ್ಡಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸಿನಿಮಾ ಲೋಕದಿಂದ ದೂರವಾಗಿದ್ದರೂ ಅನಿತಾ ಹಿಂದಿಯ 'ನಾಗಿನ್' ಸರಣಿಯ ಧಾರಾವಾಹಿಯಲ್ಲಿ ಸಖತ್ ಮಿಂಚಿದ್ದರು. ನಂತ್ರ ಕೆಲವು ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ಮೂಲಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅನಿತಾ ಹಸ್ಸನಂದನಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಈ ಫೋಟೋನೋಡಿ ಅನಿತಾ ಫ್ಯಾನ್ಸ್​​ ಈಗಲೂ ಈಕೆ ಇಷ್ಟೊಂದು ಫಿಟ್ ಆಗಿದ್ದಾರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net