

ಅಮೆರಿಕಾ: ಹಾಲಿವುಡ್‌ನ ನಟಿ ಕ್ಯಾಮೆರಾನ್ ಡಿಯಾಜ್ 51ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ನಟಿಯ ಪತಿ ಬೆಂಜಿ ಮ್ಯಾಡೆನ್ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಕ್ಯಾಮೆರಾನ್ ಡಿಯಾಜ್, ಬೆಂಜಿ ಮ್ಯಾಡೆನ್ ಅವರು 2015ರಲ್ಲಿ ಮದುವೆಯಾಗಿದ್ದರು. 2019ರಲ್ಲಿ ನಟಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಎರಡನೇ ಮಗುವಿಗೆ ಕ್ಯಾಮೆರಾನ್ ಡಿಯಾಜ್ ಅವರು ತಾಯಿಯಾಗಿದ್ದಾರೆ.
ದಂಪತಿಗಳು ಶುಕ್ರವಾರ ಹಂಚಿಕೊಂಡ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕವಾಗಿ ತಮ್ಮ ಮಗನ ಆಗಮನವನ್ನು ಘೋಷಿಸಿದ್ದಾರೆ. ಅಭಿಮಾನಿಗಳು ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಟಾರ್ ಜೋಡಿಗೆ ಶುಭಕೋರಿದ್ದಾರೆ.
ಕ್ಯಾಮೆರಾನ್ ಡಿಯಾಜ್ ಪತಿ ಬೆಂಜಿ ಮ್ಯಾಡೆನ್ ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿದ್ದು, ನಮ್ಮ ಕುಟುಂಬಕ್ಕೆ ಮಗನ ಆಗಮನವಾಗಿದೆ. ನೋಡಲು ತುಂಬ ಮುದ್ದಾಗಿದ್ದಾನೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಾವು ಆತನ ಫೋಟೋ ಪೋಸ್ಟ್ ಮಾಡಿಲ್ಲ. ಅವನಿಗೆ ಕಾರ್ಡಿನಲ್ ಮ್ಯಾಡೆನ್ ಎಂಬುದಾಗಿ ಹೆಸರಿಡಲು ತೀರ್ಮಾನಿಸಿದ್ದೇವೆ. ನಿಮ್ಮ ಆಶೀರ್ವಾದ, ಹಾರೈಕೆ ಇರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.