ದೇವಸ್ಥಾನದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟ, ನಟಿ; ಫೋಟೋ ವೈರಲ್

aparnadas
Published on

ಕೇರಳ: ಮಲಯಾಳಂ ಇಂಡಸ್ಟ್ರಿಯ ನಟಿ ಅಪರ್ಣಾ ದಾಸ್ ಮತ್ತು ಮಂಜುಮ್ಮೇಲ್ ಬಾಯ್ಸ್ ನಟ ದೀಪಕ್ ಪರಮಾ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಸಮಾರಂಭದ ಬಳಿಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಪ್ರಕಟಿಸಿದ ಈ ಲವ್ ಬರ್ಡ್ಸ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಪರ್ಣಾ ದಾಸ್ , ದೀಪಕ್ ಪರಮಾ ಜೋಡಿ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹಕ್ಕೂ ಮುನ್ನ ದಂಪತಿ ವಡಕಂಚೇರಿಯ ದೇವಸ್ಥಾನದಲ್ಲಿ ಸರಳವಾಗಿ ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅವರ ವಿವಾಹ ನೆರವೇರಿತು. ಅವರ ಮದುವೆ ಸಮಾರಂಭದ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮಲಯಾಳಿ ಇಂಡಸ್ಟ್ರಿಯ ಅಪರ್ಣಾ ದಾಸ್ ಮತ್ತು ದೀಪಕ್ ಪರಮಾ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಸಮಾರಂಭದ ಬಳಿಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಪ್ರಕಟಿಸಿದ ಈ ಲವ್ ಬರ್ಡ್ಸ್ ಇದೀಗ ಮದುವೆ ಸಮಾರಂಭದಲ್ಲಿ ಒಂದಾಗಿದ್ದಾರೆ. ತೆಲುಗಿನ ಆದಿಕೇಶವ ಚಿತ್ರದಲ್ಲಿ ಅಪರ್ಣಾ ದಾಸ್ ನಟಿಸಿದ್ದರು.

ನಟ ದೀಪಕ್ ಪರಮ ಮಲರವಾಡಿ ಆರ್ಟ್ಸ್ ಕ್ಲಬ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಅದರ ನಂತರ, ಅವರು ಇತ್ತೀಚೆಗೆ ಅನೇಕ ಚಿತ್ರಗಳಲ್ಲಿ ನಟಿಸಿದರು, ಅವರು ಬಾಕ್ಸ್ ಆಫೀಸ್ ಸೆನ್ಸೇಷನ್ ಮಂಜುಮ್ಮೆಲ್ ಬಾಯ್ಸ್ ಮೂಲಕ ಗುರುತಿಸಿಕೊಂಡರು. ಸದ್ಯ ವರಶಂ ಪರಿ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net