

ಆಂಧ್ರಪ್ರದೇಶ: ಟಾಲಿವುಡ್ನಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳು ತೆರೆಕಾಣಲು ಸಿದ್ಧಗೊಂಡಿದ್ದು, ಈ ವರ್ಷದ ಪ್ರಾರಂಭದಲ್ಲಿ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾದ ರೀತಿಯಲ್ಲೇ ಈ ಬಾರಿಯೂ ಕೂಡ ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಎಂಟ್ರಿ ಕೊಡಲು ಮುಂಚೂಣಿಯಲ್ಲಿವೆ. ಈ ಪೈಕಿ ಸಿಕ್ಕಾಪಟ್ಟೆ ಹಾಟ್ ದೃಶ್ಯಗಳನ್ನು ಒಳಗೊಂಡಿರುವ ಸಿನಿಮಾವೊಂದು ಸದ್ಯ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಿನಿಪ್ರೇಕ್ಷಕರ ಹುಬ್ಬೇರಿಸುವಂತೆ ಮಾಡಿದೆ.
ಮಲಯಾಳಂ, ತೆಲುಗು ನಟಿ ಅನುಪಮಾ ಪರಮೇಶ್ವರನ್ ಮತ್ತು ನಟ ಸಿದ್ಧು ಮುಖ್ಯಭೂಮಿಕೆಯಲ್ಲಿರುವ 'ಟಿಲ್ಲು ಸ್ಕ್ವೇರ್' ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದು, ಸಿನಿಮಾದಲ್ಲಿನ ಬೋಲ್ಡ್ ದೃಶ್ಯಗಳು ನೋಡುಗರನ್ನು ಭಾರೀ ಅಚ್ಚರಿಗೆ ದೂಡಿದೆ. ಟ್ರೇಲರ್ನ ಹಲವು ಭಾಗಗಳಲ್ಲಿ ನಟಿ ಅನುಪಮಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಸಿದ್ದು ಜತೆಗೆ ಲಿಪ್ಲಾಕ್ ಸೀನ್ಗಳು ಮಾಡಿದ್ದಾರೆ.
ಈ ಮೂಲಕ ಇದೀಗ ಸಿನಿಪ್ರೇಕ್ಷಕರು ಹಾಗೂ ಅವರ ಅಭಿಮಾನಿಗಳ ಕಾತರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಚಿತ್ರದಲ್ಲಿ ಅನುಪಮಾ ಬೋಲ್ಡ್ ಅವತಾರವು ನೋಡುಗರನ್ನು ಬೆಚ್ಚಿಬೀಳಿಸಿದ್ದು, ಸದ್ಯ ಕಥಾಹಂದರದ ಬಗ್ಗೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಮಲಿಕ್ ರಾಮ್ ನಿರ್ದೇಶನದ ಟಿಲ್ಲು ಸ್ಕ್ವೇರ್ ಇದೇ ಮಾರ್ಚ್ 29ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ,(ಏಜೆನ್ಸೀಸ್).