41ನೇ ವಯಸ್ಸಿನಲ್ಲಿ ತಾಯಿಯಾಗಲಿರುವ ನಟಿ; ಬೇಬಿ ಬಂಪ್ ಫೋಟೋಗಳು ವೈರಲ್

Aarti Chabria
Published on

ಮುಂಬೈ:  ಬಾಲಿವುಡ್ ನಟಿ ಆರತಿ ಛಾಬ್ರಿಯಾ 41 ನೇ ವಯಸ್ಸಿನಲ್ಲಿ ತಾಯಿಯಾಗಲಿದ್ದಾರೆ. ಇತ್ತೀಚೆಗೆ ಆರತಿ ಛಾಬ್ರಿಯಾ ಅವರ ಬೇಬಿ ಬಂಪ್ ಫೋಟೋಗಳು ವೈರಲ್ ಆಗುತ್ತಿವೆ.

ನಟಿ ಆರತಿ, ಕನ್ನಡದ ಅಹಂ ಪ್ರೇಮಾಸ್ಮಿ , ಸಂತ‌ , ರಜನಿ  ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳ ಮೂಲಕವಾಗಿ ಕನ್ನಡದ ಅಭಿಮಾನಿಗಳನ್ನು ಸಂಪಾಸಿದಿಸಿಕೊಂಡಿದ್ದಾರೆ.

ಮುಂಬೈ ಮೂಲದ ಆರತಿ ಛಾಬ್ರಿಯಾ ಬಾಲಿವುಡ್‌ನಲ್ಲಿ ಲಜ್ಜಾ, ಆವಾರಾ ಪಾಗಲ್ ದೀವಾನಾ, ಶೂಟೌಟ್ ಅಟ್ ಲೋಖಂಡ್‌ವಾಲಾ, ಮಿಲೇಂಗೆ ಮಿಲೇಂಗೆ.. ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಆರತಿ ಛಾಬ್ರಿಯಾ 2019 ರಲ್ಲಿ ಆಸ್ಟ್ರೇಲಿಯಾದ ಚಾರ್ಟರ್ಡ್ ಅಕೌಂಟೆಂಟ್ ವಿಸಾರದ್ ಬಿಡಾಸ್ಸಿ ಅವರನ್ನು ವಿವಾಹವಾಗಿ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದಾರೆ.  ಎರಡು ದಿನಗಳ ಹಿಂದೆ, ಆರತಿ ಛಾಬ್ರಿಯಾ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬೇಬಿ ಬಂಪ್‌ ಕಾಣುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆರತಿ ಛಾಬ್ರಿಯಾ ಅವರ ಬೇಬಿ ಬಂಪ್ ಫೋಟೋಗಳು ಇತ್ತೀಚೆಗೆ ಭಾರತದಲ್ಲಿ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಅವರನ್ನು ಅಭಿನಂದಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net