ಹಾವೇರಿ ಅಪಘಾತ: ಮೃತರ ಕುಟುಂಬಕ್ಕೆ ಧನ ಸಹಾಯ ಮಾಡಿದ ನಟ ಶಿವರಾಜ್​ಕುಮಾರ್​ ದಂಪತಿ

ವಿಜಯವಾಣಿ - 2024-07-08T135843.340
Published on

ಹಾವೇರಿ: ಜೂನ್ 28ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಜಿಲ್ಲೆಯ ಎಮ್ಮೆಹಟ್ಟಿಯ 13 ಮಂದಿ ದುರ್ಮರಣ ಹೊಂದಿದ್ದರು. ಇಂದು ಮೃತರ ಕುಟುಂಬಗಳನ್ನು ಖದ್ದಾಗಿ ಭೇಟಿ ಮಾಡಿದ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್​ಕುಮಾರ್​ ಮತ್ತು ಅವರ ಪತ್ನಿ ಗೀತಾ, ವೈಯಕ್ತಿಕ ಸಹಾಯಕ್ಕೆ ಮುಂದಾಗಿದ್ದಾರೆ.

ಇಂದು ಬೆಳಗ್ಗೆ 11:30ರ ಸುಮಾರಿಗೆ ಎಮ್ಮೆಹಟ್ಟಿಗೆ ಭೇಟಿ ನೀಡಿದ ಶಿವರಾಜ್​ಕುಮಾರ್ ದಂಪತಿ, ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದ ಭಾರಿ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದರು. ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬಗಳಿಗೆ ಅವರು ತಲಾ 1 ಲಕ್ಷ ರೂ. ಹಣ ಸಹಾಯ ಮಾಡಿದ್ದಾರೆ.

ಇದೀಗ ಮೃತರ ಕುಟುಂಬಗಳಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ ನಟನಿಗೆ ಸ್ಥಳೀಯರು ಮತ್ತು ಮೃತರ ಕುಟುಂಬದವರು ಧನ್ಯವಾದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net