

ಹಾವೇರಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಟ ರಮೇಶ್ ಅರವಿಂದ್ ಮಾತನಾಡುತ್ತಾ, ಪ್ರತಿಯೊಬ್ಬರಿಗೂ ಅವರದ್ದೇ ಆದ ನೆಮ್ಮದಿಯ ಜೀವನ ಇದೆ. ಆದರೆ ಈ ಜೀವನ ಸಾಲದು. ಇದಕ್ಕಿಂತಲೂ ವಿಶೇಷವಾದದ್ದು ಬೇಕು ಎಂಬ ಕಾತರ ಎಲ್ಲರಿಯೂ ಇರುತ್ತದೆ. ಆ ಚಡಪಡಿಕೆಯನ್ನು ಸಾಹಿತ್ಯ ನೀಡುತ್ತದೆ. ನಮಗೆ ಗೊತ್ತಿಲ್ಲದ ಜ್ಞಾನ, ಪ್ರಪಂಚವನ್ನು ತೋರಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ ಎಂದು ಹೇಳಿದರು.
ಇದೇ ವೇಳೆ ಸಾಧಕರಿಗೆ ಮೂರು ಸಲಹೆಯನ್ನು ನೀಡಿದರು. ಜೀವನದಲ್ಲಿ ಪ್ರತಿಯೊಬ್ಬರೂ ಸಾಧನೆ ಮಾಡಬೇಕು. ಮುಖ್ಯವಾಗಿ ಸಾಧಿಸಿದ ನಂತರ ಮೂರು ವಿಚಾರಗಳನ್ನು ಸದಾ ನೆನಪಿನಲ್ಲಿ ಇಡಬೇಕು ಎಂದರು.
1) ಸಾಧಕರಾದವರು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು
2) ವಿಮಾನದಲ್ಲಿ ಹೆಚ್ಚಿನ ಭಾರ ಹಾಕಿದರೆ ಹಾರಲು ಆಗುವುದಿಲ್ಲ. ಹಾಗೆಯೇ ಸಾಧಕರು ಉತ್ತುಂಗಕ್ಕೆ ಏರಿದಾಗ ಗೆಲುವನ್ನು ವಿನಯದಿಂದ ಸ್ವೀಕರಿಸಬೇಕು.
3) ಫಸಲಿಲ್ಲದ ಕೃಷಿಗೆ ಸಮಯಕ್ಕೆ ಸಲ್ಲದ ಸಾಲಕ್ಕೆ, ಸಾಕ್ಷಿ ಇಲ್ಲದ ಅಪವಾದಕ್ಕೆ ಹಾಗೂ ಮಾನವೀಯತೆ ಇಲ್ಲದ ಸಾಧನೆಗೆ ಬೆಲೆಯೇ ಇಲ್ಲ. ಹೀಗಾಗಿ ಸಾಧಕರು ಮಾನವೀಯತೆಯಿಂದ ಇರಬೇಕು ಎಂದು ಸಂದೇಶ ನೀಡಿದರು.