

ಮುಂಬೈ: 'ಮೈ ನೇಮ್ ಈಸ್ ಖಾನ್', 'ರಾಗಿಣಿ ಎಂಎಂಎಸ್ 2' ಖ್ಯಾತಿಯ ಬಾಲಿವುಡ್ ಚಿತ್ರನಟ ಪರ್ವಿನ್ ದಾಬಸ್ ಚಲಿಸುತ್ತಿದ್ದ ಕಾರು ರಸ್ತೆ ಅಪಘಾತಕ್ಕೆ ತುತ್ತಾಗಿದ್ದು, ನಟನನ್ನು ಇದೀಗ ಐಸಿಯುಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಪ್ರವೀಣ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಬಾಲಿವುಡ್ನ ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸಿರುವ ಪರ್ವಿನ್, ತಮ್ಮ ಪಾತ್ರದಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ದಾಬಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಮುಂಬೈನ ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆ ಕೊಡಿಸಲಾಗಿದೆ.
ಮಾಹಿತಿ ಪಡೆದ ನಟನ ಪತ್ನಿ ಆಸ್ಪತ್ರೆಗೆ ಆಗಮಿಸಿದ್ದು, ವೈದ್ಯರಿಗೆ ಬೇಕಾದ ಅಗತ್ಯ ಮಾಹಿತಿಯನ್ನು ಕೊಡುವಲ್ಲಿ ಸಹಕರಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯದ ಮಟ್ಟಿಗೆ ಅಪಘಾತ ಹೇಗೆ ಸಂಭವಿಸಿತು? ಯಾವ ಸಮಯದಲ್ಲಿ ನಡೆಯಿತು? ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ,(ಏಜೆನ್ಸೀಸ್).