

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 4ರ ವಿನ್ನರ್, ನಟ, ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್ ಮುಂದಿನ ವಾರ ಮದುವೆಯಾಗಲಿದ್ದಾರಂತೆ. ಅಲ್ಲೇ ಬಂದು ಆಶೀರ್ವಾದ ಮಾಡ್ಬೇಕಂತೇನೂ ಇಲ್ಲ.ಕರೆಯೋಕೆ ಸಂಭ್ರಮವೂ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು ಸರಳವಾಗಿ ಮದುವೆಯಾಗುವುದಾಗಿ ತಿಳಿಸಿದ್ದು, ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ ಎಂದಿದ್ದಾರೆ.
ಮುಂದಿನ ವಾರ ನನ್ನ ಮದುವೆ ಅಲ್ಲೇ ಬಂದು ಆಶೀರ್ವಾದ ಮಾಡ್ಬೇಕಂತೇನೂ ಇಲ್ಲ.ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ ಹಾಗಂತ ಸುಮ್ಮನೆ ಮೆಸ್ಸೇಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಅದ್ದೂರಿ ಆಗಿ ಮದುವೆ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ,ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲಿಯೇ ಹಾರೈಸಿ ಎಂದು ತಾವು ಮದುವೆಯಾಗುತ್ತಿರುವ ಬಗ್ಗೆ ನಟ ಪ್ರಥಮ್ ಹೇಳಿಕೊಂಡಿದ್ದಾರೆ.
ಪ್ರಥಮ್ ಅವರು ಸದಾ ಸರಳತೆ, ನ್ಯಾಯ, ಧರ್ಮ ಎಂದು ಹೇಳುತ್ತಲೇ ಬಂದಿದ್ದರು. ಈಗ ಅವರು ಹೇಳಿದಂತೆ ಸರಳವಾಗಿ ಮದುವೆ ಆಗುತ್ತಿದ್ದಾರೆ. ಪ್ರಥಮ್ ಅವರ ಪೋಸ್ಟ್ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ, ಅನೇಕರು ಇದು ಉತ್ತಮ ನಡೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.
ನಟ ಪ್ರಥಮ್ ಅವರು ಜೂನ್ ತಿಂಗಳಿನಲ್ಲಿ ಮಂಡ್ಯದ ಭಾನುಶ್ರೀ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶ್ಚಿತಾರ್ಥಕ್ಕೆ ನಾಲ್ಕು ಜನರನ್ನು ಕರೆದು ಊಟ ಹಾಕಿಸಬೇಕಿತ್ತು ಅಂತ ಕೆಲವರು ಹೇಳಿದ್ರು. ವೃದ್ಧಾಶ್ರಮವೊಂದರ 138 ಜನರಿಗೆ ಸಿಹಿ ಊಟ ಹಾಕಿಸ್ತೀವಿ. ಚಳಿಗಾಲದ ಆಸರೆಗಾಗಿ ಒಂದು ಶಾಲು ಕೊಡ್ತೀವಿ ಎಂದು ನಟ ಪ್ರಥಮ್ ಕೊಂದು ಮಾತನಾಡಿದವರ ಬಾಯಿ ಮುಚ್ಚಿಸಿದವರಿಗೆ.