More

    ಏಕದಿನ ವಿಶ್ವಕಪ್​ ಸೆಮಿಫಿನಾಲೆಗೆ ಮಳೆ ಅಡ್ಡಿಪಡಿಸಿದರೆ ಮುಂದೇನು?; ಹೀಗಿದೆ ಲೆಕ್ಕಾಚಾರ

    ಮುಂಬೈ: ಹಾಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವು ಅಜೇಯವಾಗಿ ಉಳಿದಿದ್ದು, ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಗೆದ್ದು ತನ್ನ ಗೆಲುವಿನ ಓಟವನ್ನು ವಿಸ್ತರಿಸಲು ಮುಂದಾಗಿದೆ. ಈಗಾಗಲೇ ಭಾರತ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡವು ಸೆಮಿಫಿನಾಲೆ ಪ್ರವೇಶಿಸಿದ್ದು, ನಾಲ್ಕನೇ ಸ್ಥಾನಿಯಾಗಿ ನ್ಯೂಜಿಲೆಂಡ್​ ತಂಡ ಪ್ರವೇಶಿವುದು ಬಹುತೇಕ ಖಚಿತವಾಗಿದೆ.

    ಒಂದು ವೇಳೆ ನ್ಯೂಜಿಲೆಂಡ್​ ತಂಡವು ನಾಲ್ಕನೇ ಸ್ಥಾನಿಯಾಗಿ ಸಮಿಫಿನಾಲೆ ಪ್ರವೇಶಿಸಿದರೆ ಭಾರತವನ್ನು ಎದುರಿಸಲಿದೆ. ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಉಳಿದಿರುವ ಭಾರತ ತಂಡವು ಭಾನುವಾರ ನೆದರ್ಲೆಂಡ್​ ವಿರುದ್ಧ ಸೋತರೂ ಅಗ್ರಸ್ಥಾನಿಯಾಗಿ ಸೆಮಿಫಿನಾಲೆ ಪ್ರವೇಶಿಸಲಿದೆ.

    ನಾಲ್ಕನೇ ಸ್ಥಾನಕ್ಕೆ ಪಾಕಿಸ್ತಾನ ತಂಡವು ನ್ಯೂಜಿಲೆಂಡ್​ಗೆ ಪ್ರಮುಖ ಸವಾಲಾಗಿದ್ದು, ಒಂದು ವೇಳೆ ಪಾಕ್​ ಗೆಲ್ಲಬೇಕಾದರೆ ಶನಿವಾರ ಇಂಗ್ಲೆಂಡ್​ ವಿರುದ್ಧ ನಡೆಯುವ ಪಂದ್ಯದಲ್ಲಿ ಭರ್ಜರಿ ಜಯಗಳಿಸಿ ಸೆಮಿಫಿನಾಲೆಗೆ ಲಗ್ಗೆ ಇಡಬೇಕಾಗಿದೆ. ನಾಲ್ಕಣೇ ಸ್ಥಾನಿಯಾಗಿ ನ್ಯೂಜಿಲೆಂಡ್​ ತಂಡವು ಈಗಾಗಲೇ ಎಲ್ಲರ ಹಾಟ್​ ಫೇವರಿಟ್​ ಆಗಿದ್ದು, ಭಾರತ ಎದುರು ಆಡಬೇಕೆಂದು ಹಲವರು ಬಯಸಿದ್ದಾರೆ. ಏಕೆಂದರೆ 2019ರ ಏಕದಿನ ವಿಶ್ವಕಪ್​ ಸೆಮಿಫಿನಾಲೆಯ ಸೇಡು ತೀರಿಸಿಕೊಳ್ಳಲು ರೋಹಿತ್​ ಶರ್ಮಾ ಪಡೆ ಸಜ್ಜಾಗಿ ನಿಂತಿದೆ.

    Team India

    ಇದನ್ನೂ ಓದಿ: “ಜೈ ಶ್ರೀರಾಮ್”​ ಘೋಷಣೆ ಪ್ರೀತಿ, ಏಕತೆಯ ಸಂಕೇತ: ಜಾವೇದ್ ಅಖ್ತರ್

    ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡವು ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದು, ನವೆಂಬರ್​ 16ರಂದು ಕ್ರಿಕೆಟ್​ ಕಾಶಿ ಈಡನ್​ ಗಾರ್ಡನ್​ನಲ್ಲಿ ಮುಖಾಮುಖಿಯಾಗಲಿವೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯಗಳಿಸಿದ್ದಲ್ಲಿ ಎರಡನೇ ಸ್ಥಾನಿಯಾಗಿ ಲೀಗ್​ ಹಂತದ ಪಂದ್ಯಗಳನ್ನು ಮುಗಿಸಿ ಸೆಮಿಫಿನಲಾಗೆ ತಯಾರಿ ಆರಂಭಿಸಲಿದೆ.

    ಮಳೆ ಅಡ್ಡಿಪಡಿಸಿದರೆ ಮುಂದೇನು?

    ನವೆಂಬರ್​ 15 ಹಾಗೂ 16ರಂದು ನಡೆಯುವ ಸೆಮಿಫಿನಾಲೆ ಪಂದ್ಯಕ್ಕೆ ಮಳೆ ಅಡ್ಡಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಏಕೆಂದರೆ ಮುಂಬೈ ಹಾಗೂ ಕಲ್ಕತ್ತಾದಲ್ಲಿ ನಾಕ್​ಔಟ್​ ಪಂದ್ಯಗಳು ನಡೆಯಲಿದ್ದು, ಈ ಎರಡು ನಗರಗಲು ಸಮುದ್ರಕ್ಕೆ ಹತ್ತಿರವಾಗಿದೆ. ಒಂದು ವೇಳೆ ಮಳೆಯಿಂದ ಪಂದ್ಯಕ್ಕೆ ಅಡಚಣೆ ಉಂಟಾದರೆ ಮೀಸಲು ದಿನದಂದು ಪಂದ್ಯ ನಡೆಸಲಾಗುತ್ತದೆ.

    ಒಂದು ವೇಳೆ ಮೀಸಲು ದಿನವು ಪಂದ್ಯಕ್ಕೆ ಮಳೆ ಅಡ್ಡಪಡಿಸಿದರೆ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಉತ್ತಮ ರನ್​ರೇಟ್​ ಹಾಗೂ ಗೆಲುವಿನ ಲೆಕ್ಕಚಾರದ ಮೇಲೆ ಫಿನಾಲೆ ಪ್ರವೇಶಿಸಲಿದೆ. ಒಂದು ವೇಳೆ ಭಾರತ ಹಾಗೂ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಹಾಗೆ ಆದಲ್ಲಿ ಟೀಂ ಇಂಡಿಯಾ ನೇರವಾಗಿ ಫಿನಾಲೆ ಪ್ರವೇಶಿಸಲಿದೆ. ಈ ಮೂಲಕ ಭಾರತ 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ವಿಶ್ವಕಪ್​ ಸೆಮಿಫಿನಲಾಎ ಸೋಲನ್ನು ತೀರಿಸಿಕೊಂಡಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts