

ಬೆಂಗಳೂರು: ದಕ್ಷಿಣ ಭಾರತದ ಪ್ರತಿಭಾವಂತ ನಟಿ ಪ್ರಣೀತಾ ಸುಭಾಷ್ ಅವರು ಕರೊನಾ ಲಾಕ್ಡೌನ್ ವೇಳೆ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಳೆದ ಭಾನುವಾರ ಉದ್ಯಮಿ ನಿತಿನ್ ರಾಜು ಜತೆ ನಟಿ ಪ್ರಣೀತಾ ಸದ್ದಿಲ್ಲದೆ ಸಪ್ತಪದಿ ತುಳಿದಿದ್ದಾರೆ. ಕುಟುಂಬಸ್ಥರು ಮತ್ತು ಕುಟುಂಬದ ಆಪ್ತರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷೀಕರಿಸುವ ಫೋಟೋವನ್ನು ಪ್ರಣೀತಾರ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ, ಪ್ರಣೀತಾ ಮಾತ್ರ ಇದುವರೆಗೂ ತನ್ನ ಮದುವೆ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇದನ್ನೂ ಓದಿರಿ ಹಸಿವು ಸಹಿಸಲಾಗ್ತಿಲ್ಲ, ನಮ್ಗೆ ಕರೊನಾ ಸೋಂಕಾದರೂ ಬರಲಿ.. ಆಸ್ಪತ್ರೆಯಲ್ಲಿ ಒಪ್ಪೊತ್ತಿನ ಊಟವಾದ್ರೂ ಸಿಗುತ್ತೆ…
ಮೂಲಗಳ ಪ್ರಕಾರ ನಟಿ ಪ್ರಣೀತಾ ಅದ್ದೂರಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಕರೊನಾ ಲಾಕ್ಡೌನ್ ಹಿನ್ನೆಲೆ ಸರಳ ವಿವಾಹ ನೆರವೇರಿದೆ. ಇನ್ನು ಪ್ರಣೀತಾರನ್ನು ಕೈಹಿಡಿದ ವರ ನಿತಿನ್ ರಾಜ್ ಬೆಂಗಳೂರಿನವರು.
ದರ್ಶನ್ ಅಭಿನಯದ 'ಪೊರ್ಕಿ' ಸಿನಿಮಾದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣೀತಾ ತೆಲುಗು, ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ.