ಜಿಮ್​ ಟ್ರೇನರ್​ಗೆ ಪ್ರಭಾಸ್​ ನೀಡಿದರು ವಿಶೇಷ ಉಡುಗೊರೆ

Prabhas'
Published on

ಪ್ಯಾನ್​ ಇಂಡಿಯಾ ಹೀರೋ ಪಟ್ಟ ಗಿಟ್ಟಿಸಿಕೊಂಡಿರುವ ನಟ ಪ್ರಭಾಸ್​, ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಒಂದಾದ ನಂತರ ಒಂದು ಸಿನಿಮಾ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಚಿತ್ರಗಳಿಗಾಗಿ ತಯಾರಿಯೂ ಜೋರಾಗಿಯೇ ನಡೆದಿದೆ. ಹೀಗಿರುವಾಗಲೇ ಮತ್ತೊಂದು ವಿಚಾರಕ್ಕೆ ಪ್ರಭಾಸ್ ಸುದ್ದಿಯಾಗಿದ್ದಾರೆ.

ಹೌದು, ಪ್ರಭಾಸ್​ ತಮ್ಮ ಜಿಮ್ ಟ್ರೇನರ್​ಗೆ ವಿಶೇಷವಾದ ಗಿಫ್ಟ್​ ನೀಡಿದ್ದಾರೆ. ಆ ಉಡುಗೊರೆಯೇ ಈಗ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬರೋಬ್ಬರಿ 73ಲಕ್ಷ ಮೌಲ್ಯದ ರೇಂಜ್​ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಜಿಮ್​ ಟ್ರೇನರ್​ ಲಕ್ಷ್ಮಣ್​ ರೆಡ್ಡಿ 2010ರಲ್ಲಿ ಮಿಸ್ಟರ್ ವರ್ಲ್ಡ್​ ಪಟ್ಟ ಗಿಟ್ಟಿಸಿಕೊಂಡಿದ್ದರು. ಅದಾದ ಬಳಿಕ ಪ್ರೊಫೆಷನಲ್​ ಜಿಮ್​ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಾಲಿವುಡ್​ನ ಸಾಕಷ್ಟು ಸೆಲೆಬ್ರಿಟಿಗಳು ಇವರ ಬಳಿ ತರಬೇತಿ ಪಡೆದುಕೊಂಡಿದ್ದಾರೆ. ಸದ್ಯ ಪ್ರಭಾಸ್​ ತಮ್ಮ ಮುಂದಿನ ಸಿನಿಮಾಗಳಿಗಾಗಿ ಅವರ ಕೆಳಗೆ ತರಬೇತಿ ಪಡೆಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net