ಓಪನ್ ಏರ್ ಥಿಯೇಟರ್ ಪಾರ್ಟಿಯಲ್ಲೂ ಡ್ರಗ್ಸ್ ನಶೆ!

Open Air Theater Party
Published on

ಬೆಂಗಳೂರು: ಪಾರ್ಟಿ ಆಯೋಜಿಸುವ ಮೂಲಕ ಸಿನಿಮಾ ನಟ-ನಟಿಯರಿಗೆ, ಪ್ರತಿಷ್ಠಿತರಿಗೆ ಆಹ್ವಾನ ನೀಡಿ ಡ್ರಗ್ಸ್​ ನಶೆ ಏರಿಸುತ್ತಿದ್ದ ವೀರೇನ್​ ಖನ್ನಾ ಸದ್ಯ ಸಿಸಿಬಿ ಕಸ್ಟಡಿಯಲ್ಲಿದ್ದಾನೆ. ಈತನ ಡ್ರಗ್ಸ್​ ದಂಧೆಯ ಘಾಟು ಓಪನ್ ಏರ್ ಥಿಯೇಟರ್​ನಲ್ಲೂ ಪಸರಿಸಿದ್ದು ತನಿಖೆಯಲ್ಲಿ ಬಯಲಾಗಿದೆ.

369drivein.com ವೆಬ್​ಸೈಟ್​ನಲ್ಲಿ ಐಷಾರಾಮಿ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದ ಡ್ರಗ್ಸ್​ ದಂಧೆಯ ಕಿಂಗ್​ಪಿನ್​ ವೀರೇನ್​ ಖನ್ನಾ, ಫ್ಯಾಮಿಲಿ ಪಾರ್ಟಿ ಹೆಸರಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ. ಡ್ರಗ್ಸ್​ ಸೇವಿಸಿ ಮಜಾ ಮಾಡಲು ಬೆಂಗಳೂರು ನಗರ ಹೊರವಲಯದ ನಿರ್ಜನ ಪ್ರದೇಶದಲ್ಲಿ ಓಪನ್ ಏರ್ ಥಿಯೇಟರ್ ಪಾರ್ಟಿ ನಡೆಸಿದ್ದ. ಕರೊನಾ ಸಂದರ್ಭದಲ್ಲಿ ಜನ ನರಳುತ್ತಿದ್ದರೆ ಈತ ಮತ್ತು ಈತನ ಟೀಂ ಪಾರ್ಟಿಯಲ್ಲಿ ಬಿಸಿಯಾಗಿತ್ತು. ಆ ಪಾರ್ಟಿ ಹೇಗಿರೋದು ಗೊತ್ತಾ? 'ಟೇಕ್ ಯೂ ಆರ್ ವೋನ್​ ಕಾರ್.. ಟೇಕ್ ಯೂ ಆರ್ ವೋನ್​ ಡ್ರಿಂಕ್' ಕಾನ್ಸೆಪ್ಟ್ ನಲ್ಲಿ ಓಪನ್ ಏರ್ ಥಿಯೇಟರ್ ಪಾರ್ಟಿಯನ್ನು ವೀರೇನ್​ ಖನ್ನಾ ಆಗಾಗ ಆಯೋಜಿಸುತ್ತಿದ್ದ.

ಆನ್​ಲೈನ್​ನಲ್ಲೇ ಬುಕ್ಕಿಂಗ್ ಮಾಡಿಸಿ, ಪಾರ್ಟಿಗೆ ಇನ್ವೈಟ್ ಮಾಡುತ್ತಿದ್ದ. ಪಾರ್ಟಿಯಲ್ಲಿ ಪಾಲ್ಗೊಂಡವರಿಗೆ ಡ್ರಗ್ಸ್​ ಕೂಡ ಅಲ್ಲೇ ಸಪ್ಲೈ ಮಾಡುತ್ತಿದ್ದ.

ನಿರ್ಜನ ಪ್ರದೇಶದಲ್ಲಿ ಬೃಹತ್​ ಪರದೆಯಲ್ಲಿ ಬಾಲಿವುಡ್- ಹಾಲಿವುಡ್ ಸಿನಿಮಾ ಪ್ರದರ್ಶನ ಆಗುತ್ತಿದ್ದರೆ ವೀರೇನ್​ ಖನ್ನಾ ಆ್ಯಂಡ್ ಟೀಂ ಕಾರಿನಲ್ಲೇ ಕುಳಿತು ನೋಡಿ ಎಂಜಾಯ್ ಮಾಡುತ್ತಿತ್ತು.

ವೀರೇನ್​ ಖನ್ನಾ ಬೆಂಗಳೂರು, ದೆಹಲಿ, ಮುಂಬೈ, ಗೋವಾ ಮೊದಲಾದ ಕಡೆಗಳಲ್ಲಿ ರೇವ್​ ಪಾರ್ಟಿ ಆಯೋಜನೆ ಮಾಡುತ್ತಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net