

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಭಾರೀ ಸದ್ದು ಮಾಡುತ್ತಿದ್ದು, ಸಿನಿಮಾ ನಟ-ನಟಿಯರು ಮಾತ್ರವಲ್ಲ ಕೆಲ ರಾಜಕಾರಣಿಗಳ ಕುಟುಂಬಸ್ಥರ ಕೈವಾಡ ಇರುವುದು ಬೆಳಕಿಗೆ ಬರುತ್ತಿದೆ. ಬಿಬಿಎಂಪಿ ಕಾಂಗ್ರೆಸ್ ಕಾರ್ಪೋರೇಟರ್ವೊಬ್ಬರ ಪುತ್ರನ ಹೆಸರು ಡ್ರಗ್ಸ್ ದಂಧೆಯಲ್ಲಿ ಕೇಳಿಬಂದಿದ್ದು, ಪಕ್ಷಕ್ಕೆ ಡ್ಯಾಮೇಜ್ ಆಗುವ ಭೀತಿ ಕೆಪಿಸಿಸಿಗೆ ಎದುರಾಗಿದೆ.
ಪಕ್ಷಕ್ಕೆ ಡ್ಯಾಮೇಜ್ ತರುವ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಿಮ್ಮ ಮಕ್ಕಳ ಚಲನವಲನದ ಮೇಲೆ ನಿಗಾ ಇಡಿ. ಅವರ ತಪ್ಪಿಗೆ ನಿಮಗೆ ಟಿಕೆಟ್ ಸಿಗದಿರಬಹುದು. ಆ ಸಮಸ್ಯೆ ಆಗದಂತೆ ಎಚ್ಚೆತ್ತುಕೊಳ್ಳಿ ಎಂದು ಬೆಂಗಳೂರು ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ. ಇದನ್ನೂ ಓದಿರಿ ರಾಗಿಣಿನ ಪ್ರಚಾರಕ್ಕೆ ನಾನು ಕರೆಸಿರಲಿಲ್ಲ, ಆಕೆ ಈ ರೀತಿ ಅಂತ ಗೊತ್ತಿರಲಿಲ್ಲ; ನಾರಾಯಣ ಗೌಡ
ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದೆ. ಈ ವೇಳೆ ಡ್ರಗ್ಸ್ ಮಾಫಿಯಾದಲ್ಲಿ ಪಕ್ಷದ ನಾಯಕರ ಕುಟುಂಬಸ್ಥರ ಹೆಸರು ಬಂದರೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ಅರಿತ ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಮುಖಂಡರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಗಾಂಜಾ ಮಾಫಿಯಾದಲ್ಲಿ ನಿಮ್ಮ/ನಿಮ್ಮವರ ಹೆಸರು ಕೇಳಿಬಂದ್ರೆ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಸಿಗಲ್ಲ ಎಂದು ಎಚ್ಚರಿಸಿದ್ದಾರೆ.