

ಬೆಂಗಳೂರು: ಸ್ಯಾಂಡಲ್ವುಡ್ನ 'ಮಾದಕ' ನಟಿ ರಾಗಿಣಿ ದ್ವಿವೇದಿಯ ಆಪ್ತ ರವಿಶಂಕರ್ಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕನ್ನಡ ಸಿನಿಮಾ ನಟ-ನಟಿಯರಿಗೆ ಡ್ರಗ್ಸ್ ಮಾಫಿಯಾ ನಂಟಿರುವ ಪ್ರಕರಣದ ಜಾಡು ಹಿಡಿದು ಹೊರಟ ಸಿಸಿಬಿ ಈಗಾಗಲೇ ರವಿಶಂಕರ್, ರಾಗಿಣಿ ದ್ವಿವೇದಿ ಜತೆಗೆ ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್ನನ್ನು ಬಂಧಿಸಿದ್ದಾರೆ. ಇದೀಗ ಮತ್ತೊಬ್ಬ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ಸಾಂಬಾ ಎಂಬಾತನನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ಸಾಂಬಾ ದಕ್ಷಿಣ ಆಫ್ರಿಕಾ ಮೂಲದವ. ಈತ ರವಿಶಂಕರ್ಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂಬುದು ಬಯಲಾಗಿದೆ.
ಇದನ್ನೂ ಓದಿರಿ ‘ನಶೆ’ಯ ನಗ್ನ ಸತ್ಯ; ವಕೀಲರ ಮೊರೆ ಹೋದ ನಟಿ ಸಂಜನಾ ಗಲ್ರಾನಿ
ತಾನು ಯಾರಿಗೆಲ್ಲ ಡ್ರಗ್ಸ್ ಸರಬರಾಜು ಮಾಡುತ್ತಿದ್ದೆ ಎಂಬುದರ ಬಗ್ಗೆ ವಿಚಾರಣೆ ವೇಳೆ ಲೂಮ್ ಪೆಪ್ಪರ್ ಸಾಂಬಾ ಬಾಯ್ಬಿಟ್ಟಿದ್ದಾನೆ. ರವಿಶಂಕರ್ ಮತ್ತು ಇತರೆ ಸೆಲೆಬ್ರಿಟಿಗಳಿಗೆ ಈತನೇ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ. ಆ ಮೂಲಕ ಸೌತ್ ಆಫ್ರಿಕಗೂ ಸ್ಯಾಂಡಲ್ವುಡ್ ಡ್ರಗ್ಸ್ ರಾಕೆಟ್ಗೂ ಲಿಂಕ್ ಸಿಕ್ಕಿದೆ. ಈತ ದಂಧೆಯ ಎ7 ಆರೋಪಿಯಾಗಿದ್ದಾನೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರವಿಶಂಕರ್ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈತನ ಜತೆಗೆ ಮತ್ತಿಬ್ಬರು ಆರೋಪಿಗಳಾದ ರಾಹುಲ್ ಮತ್ತು ಲೂಮ್ ಪೆಪ್ಪರ್ ಸಾಂಬಾನನ್ನು ವೈದ್ಯಕೀಯ ತಪಾಸಣೆ ಮಾಡಲಾಗಿದೆ.