

Kareena Kapoor: ಬಾಲಿವುಡ್ನ ಬ್ಯೂಟಿ ಕರೀನಾ ಕಪೂರ್ ಖಾನ್ ತಮ್ಮ ಅಪ್ರತಿಮ ನಟನಾ ಕೌಶಲ್ಯ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ನಟಿ. ಇವರಿಗೆ 45 ವರ್ಷ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದರೂ ಕೂಡಾ, ಇಂದಿಗೂ ತಮ್ಮ ಫಿಟ್ನೆಸ್ ಹಾಗೂ ಹೊಳೆಯುವ ಚರ್ಮಕ್ಕೆ ಹೆಸರುವಾಸಿಯಾಗಿದ್ದಾರೆ. ಕರೀನಾ ತಮ್ಮ ಚರ್ಮ ಹೊಳೆಯುವಂತೆ ಮಾಡಲು ಒದ್ದೆಯಾದ ಟಿಶ್ಯೂ ಪೇಪರ್ ಬಳಸುತ್ತಾರಂತೆ. ಇದು ಅಭಿಮಾನಿಗಳಿಗೆ ಒಂದು ನಿಮಿಷ ಆಶ್ಚರ್ಯವನ್ನೇ ಸೂಚಿಸಿದ್ದರೂ ಇದು ನಿಜ ಎಂದು ತಿಳಿದುಬಂದಿದೆ. ಇತ್ತೀಚಿಗೆ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಸೌಂದರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಹಾಗಿದ್ದರೆ ಅದೇನು ನೋಡೋಣ ಬನ್ನಿ...
ಕರೀನಾ ತನ್ನ ವ್ಯಾನಿಟಿ ವ್ಯಾನ್ನಿಂದ ತೆಗೆದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಮುಖದ ಮೇಲೆ ಒದ್ದೆಯಾದ ಟಿಶ್ಯೂ ಧರಿಸಿ ಕುಳಿತಿರುವುದನ್ನು ನಾವು ಕಾಣಬಹುದಾಗಿದೆ. ಈ ಅಭ್ಯಾಸವು ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ತಣ್ಣೀರಿನಲ್ಲಿ ನೆನೆಸಿದ ಟಿಶ್ಯೂ ಅನ್ನು ನಿಮ್ಮ ಮುಖದ ಮೇಲೆ ಕೆಲವು ಸಮಯಗಳ ಕಾಲ ಇಡುವುದರಿಂದ ಇದು ಚರ್ಮವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಇದು ಮುಖವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ನೆನಸಿದ ಟಿಶ್ಯೂವನ್ನು ಹೊರತುಪಡಿಸಿ ನಟಿ ತನ್ನ ಮುಖದ ಮೇಲೆ ಐಸ್ ಕ್ಯೂಬ್ಗಳನ್ನು ಇಡುತ್ತಾರಂತೆ. ಇದು ರಕ್ತ ಪರಿಚನೆಯನ್ನು ಹೆಚ್ಚಿಸುತ್ತದೆ ಮತ್ತು ಮುಖದ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಚರ್ಮವು ಸ್ವಚ್ಛವಾಗಿ ಮತ್ತು ಅಂದವಾಗಿ ಕಾಣುತ್ತದೆ. ಹಾಗಾಗಿ ನಟಿ ಮೇಕಪ್ ಹಚ್ಚಿಕೊಳ್ಳುವ ಮುಂಚೆ ಐಸ್ ಕ್ಯೂಬ್ಗಳನ್ನು ಮುಖಕ್ಕೆ ಹಚ್ಚಿಕೊಳ್ಳುವುದು ದೈನಂದಿನ ಅಭ್ಯಾಸ ಎಂದು ತಿಳಿಸಿದ್ದಾರೆ.
ಕರೀನಾ ಅವರ ಈ ರೀತಿಯ ಪರಿಹಾರಗಳು ಚರ್ಮವನ್ನು ತಾಜಾವಾಗಿಡುವುದಲ್ಲದೇ, ಮೇಕಪ್‌ಗೆ ಆಧಾರವನ್ನು ಸೃಷ್ಟಿಸುತ್ತದೆ. ತಂಪಾದ ತೇವಾಂಶವುಳ್ಳ ಹೊಂದಿರುವ ಇವು ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ. ಮತ್ತು ಚರ್ಮವನ್ನು ಸಿರಮ್ ಮತ್ತು ಫೌಂಡೇಶನ್ಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ಮೇಕಪ್ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ.
ಕರೀನಾ ಪ್ರಕಾರ, ನಿಜವಾದ ಸೌದರ್ಯವು ಹಚ್ಚುವ ಮೇಕಪ್ಗಳಿಂದ ಮಾತ್ರವಲ್ಲ. ಬದಲಾಗಿ ನಮ್ಮ ಆರೋಗ್ಯಕರ ಜೀವನಶೈಲಿಯಲ್ಲಿ ಬರುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ಪ್ರತಿನಿತ್ಯ ಸಾಕಷ್ಟು ನಿದ್ರೆ, ಸಾಕಷ್ಟು ನೀರು, ಸಮತೋಲಿತ ಆಹಾರ, ಯೋಗ, ಧ್ಯಾನ ಇವುಗಳು ಮನಸ್ಸನ್ನು ಶಾಂತಿಗೊಳಿಸಿದಾಗ ದೇಹವು ಆರೋಗ್ಯವಾಗಿರುವಂತೆ ಮಾಡುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಈ ಮನೆಮದ್ದಿಗೆ ಯಾವುದೇ ರೀತಿಯ ದುಬಾರಿ ಕ್ರೀಮ್ನ ಅಗತ್ಯವಿಲ್ಲ. ಸರಳವಾಗಿ ಹೇಳುವುದಾದರೆ, ಒಂದು ಟವೆಲ್ ಅಥವಾ ಟಿಶ್ಯೂ, ಹಾಗೂ ತಣ್ಣಿರು. ಒಂದು ಟೆವೆಲ್ಗೆ ತಣ್ಣೀರನ್ನು ಹಾಕಿ ಮುಖದ ಮೇಲೆ ಇಟ್ಟು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಚರ್ಮದಲ್ಲಿರುವ ಶುಷ್ಕತೆಯನ್ನು ತೆಗೆದುಹಾಕಿ ತ್ವರಿತ ತೇವಾಂಶವನ್ನು ನೀಡಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಸುಕ್ಕು ಗಟ್ಟಿದ ಚರ್ಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.