ಶ್ರೀಕೃಷ್ಣ ಆಶೀರ್ವದಿಸಿದರೆ...; ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ನೀಡಿದ ಕಂಗನಾ

Kangana Ranaut
Published on

ದ್ವಾರಕಾ: ಆ ದೇವರು ಆಶೀರ್ವದಿಸಿದದರೆ ಮುಂದಿನ ಲೋಕಸಭೆ ಎಲೆಕ್ಷನ್​ನಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ನಟಿ ಕಂಗನಾ ರನೌತ್ ಸುಳಿವು ನೀಡಿದ್ದಾರೆ.

ಗುಜರಾತ್​ನ ದ್ವಾರಕಾಧೀಶ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶ್ರೀಕೃಷ್ಣ ಆಶೀರ್ವದಿಸಿದರೆ ಎಲೆಕ್ಷನ್​ನಲ್ಲಿ ಸ್ಪರ್ಧಿಸುವುದಾಗಿ ಪರೋಕ್ಷವಾಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದಾಗಿ ಹೇಳಿದ್ದಾರೆ.

ಇದೇ ವೇಳೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಸರ್ಕಾರವನ್ನು ಕಂಗನಾ ಹಾಡಿ ಹೊಗಳಿದ್ದಾರೆ. ಬಿಜೆಪಿ ಸರ್ಕಾರದ ಸತತ ಪ್ರಯತ್ನದಿಂದಾಗಿ 600 ವರ್ಷಗಳ ಹೋರಾಟದ ಬಳಿಕ, ಭಾರತೀಯರಾದ ನಾವುಗಳು ಈ ದಿನವನ್ನು ಎದುರು ನೋಡುತ್ತಿದ್ದೇವೆ. ವಿಜೃಂಭಣೆಯಿಂದ ನಾವು ಅಲ್ಲಿ ದೇವಸ್ಥಾನವನ್ನು ಸ್ಥಾಪಿಸುತ್ತಿದ್ದೇವೆ. ಸನಾತನ ಧರ್ಮದ ಧ್ವಜವು ಪ್ರಪಂಚದಾದ್ಯಂತ ಹಾರಿಸಬೇಕು ಎಂದು ಹೇಳಿದ್ದಾರೆ.

ಇದಲ್ಲದೆ ಸಮುದ್ರದಲ್ಲಿ ಮುಳುಗಿ ಹೋಗಿರುವ ದ್ವಾರಕಾ ನಗರಕ್ಕೆ ಭೇಟಿ ನೀಡಲು ಪ್ರವಾಸಿಗರಿಗೆ ಸರ್ಕಾರ ವಿಶೇಷ ಯೋಜನೆ ಒಂದನ್ನು ಕಲ್ಪಿಸಬೇಕು. ದ್ವಾರಕಾ ನಗರವು ದೈವಿಕವಾಗಿದ್ದು, ಇಲ್ಲಿ ಎಲ್ಲವೂ ಅದ್ಭುತವಾಗಿದೆ ಎಂದು ನಟಿ ಕಂಗನಾ ರನೌತ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net