ಪೊಲೀಸರನ್ನು ಗುರಿಯಾಗಿಸಿ ಪಾಕ್​ನಲ್ಲಿ ಬಾಂಬ್ ದಾಳಿ; ಐದು ಮಂದಿ ಸಾವು

Bomb Blast
Published on

ನವದೆಹಲಿ: ಪೊಲೀಸರನ್ನು ಗುರಿಯಾಗಿಸಿ ಉಗ್ರರು ನಡೆಸಿದ ಬಾಂಬ್​ ದಾಳಿಯಲ್ಲಿ ಐವರು ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಯುವ್ಯ ಪಾಕಿಸ್ತಾನದಲ್ಲಿ ನಡೆದಿದೆ.

ಡೇರಾ ಇಸ್ಮಾಯಿಲ್​ ಖಾನ್​ ನಗರದಲ್ಲಿ ಪೊಲೀಸ್​ ಗಸ್ತು ತಿರುಗುತ್ತಿದ್ದ ವೇಳೆ ದಾಳಿ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ದಾಳಿಯ ಹೊಣೆಯನ್ನು ಯಾವ ಸಂಘಟನೆಯು ಹೊತ್ತಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಮೊಹಮ್ಮದ್ ಅದ್ನಾನ್, ಡೇರಾ ಇಸ್ಮಾಯಿಲ್​ ಖಾನ್​ ನಗರವು ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿದ್ದು, ಎರಡೂ ಇಸ್ಲಾಮಿ ಉಗ್ರಗಾಮಿಗಳ ನೆಲೆಯಾಗಿದೆ. ಪೊಲೀಸ್​ ಗಸ್ತು ತಿರುಗುವ ಮಾರ್ಗದಲ್ಲಿ ಬಾಂಬ್​ ಸ್ಪೋಟಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಘಟನೆಯಲ್ಲಿ ಐದು ಮಂದಿ ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಗಾಯಾಳುಗಳ ಮೇಲೆ ನಿಗಾ ವಹಿಸುವಂತೆ ವೈದ್ಯರಿಗೆ ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಮೊಹಮ್ಮದ್ ಅದ್ನಾನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net