More

    ಕಾವೇರಿ ಜಲವಿವಾದ; ತಮಿಳುನಾಡಿಗೆ ನವೆಂಬರ್ 23ರ ವರೆಗೂ 2.6 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಿದ CWMA

    ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ನವೆಂಬರ್ 23ರ ವರೆಗೆ ಪ್ರತಿನಿತ್ಯ ತಮಿಳುನಾಡಿಗೆ 2.6 ಸಾವಿರ ಕ್ಯೂಸೆಕ್​ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ (CWMA) ಆದೇಶಿಸಿದೆ.

    ಅಕ್ಟೋಬರ್‌ 30 ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ನವೆಂಬರ್‌ 15ರ ವರೆಗೂ ಪ್ರತಿನಿತ್ಯ 2,600 ಕ್ಯೂಸೆಕ್ ನೀರು ಹರಿಸಲು ಶಿಫಾರಸು ಮಾಡಿತ್ತು. CWRC ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ CWMAಗೆ ಅರ್ಜಿ ಸಲ್ಲಿಸಿತ್ತು. ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಎತ್ತಿಹಿಡಿರುವ ಪ್ರಾಧಿಕಾರ, ನವೆಂಬರ್ 23ರ ವರೆಗೆ ತಮಿಳುನಾಡಿಗೆ ಪ್ರತಿನಿತ್ಯ 2600 ಕ್ಯೂಸೆಕ್‌ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ.

    ಈ ಎರಡೂ ಯೋಜನೆಗಳು ಚರ್ಚೆಗೆ ಬರಬಹುದು

    ಸಭೆಯ ಬಳಿಕ ಮಾತನಾಡಿದ ACS ರಾಕೇಶ್​ ಸಿಂಗ್, ನವೆಂಬರ್ 23ರ ತನಕ ಪ್ರತಿನಿತ್ಯ 2600 ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಆದೇಶಿಸಿದೆ. ತಮಿಳುನಾಡು 13,000 ಕ್ಯೂಸೆಕ್ ನೀರು ಬಿಡಲು ಆಗ್ರಹಿಸಿತು. ಮೇಕೆದಾಟು ವಿಚಾರವಾಗಿ ಸಕಾರಾತ್ಮಕ ಬೆಳವಣಿಗೆ ಆಗಿದೆ. ಮೇಕೆದಾಟು ಯೋಜನೆ ಚರ್ಚೆಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡಲು ಪ್ರಾಧಿಕಾರ ಒಪ್ಪಿದೆ. ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಪ್ರಾಧಿಕಾರ ಭರವಸೆ ನೀಡಿದೆ.

    ಕಾವೇರಿ ಜಲವಿವಾದ; ತಮಿಳುನಾಡಿಗೆ ನವೆಂಬರ್ 23ರ ವರೆಗೂ 2.6 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಿದ CWMA

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಹಿಂದೂ ದೇವತೆಗಳ ಅಶ್ಲೀಲ ಚಿತ್ರ ಮಾರಾಟ; ಓರ್ವ ಅರೆಸ್ಟ್​

    ಅದೇ ರೀತಿ ತಮಿಳುನಾಡುನವರು ಇಂಟರ್ ಲಿಂಕಿಂಗ್ ಯೋಜನೆ ಬಗ್ಗೆ ಚರ್ಚೆ ಮಾಡಲು ಮುಂದಾಗಿದ್ದಾರೆ. ಈ ಯೋಜನೆಗೆ ಕರ್ನಾಟಕದ ಆಕ್ಷೇಪ ಇದೆ. ಮುಂದಿನ ಸಭೆಯಲ್ಲಿ ಈ ಎರಡೂ ಯೋಜನೆಗಳು ಚರ್ಚೆಗೆ ಬರಬಹುದು ಎಂದು ACS ರಾಕೇಶ್ ಸಿಂಗ್ ತಿಳಿಸಿದ್ದಾರೆ.

    ಅನಿವಾರ್ಯತೆ ಸೃಷ್ಟಿಯಾಗಿದೆ

    ಸದ್ಯದ ಆದೇಶದಂತೆ ನವೆಂಬರ್‌ 23ರವರೆಗೂ ರಾಜ್ಯದಿಂದ ತಮಿಳುನಾಡಿಗೆ ನಿತ್ಯ 2,600 ಕ್ಯೂಸೆಕ್ ನೀರು ಹರಿಸಬೇಕು. ಕಾವೇರಿ ನದಿ ಪಾತ್ರದ ಎಲ್ಲಾ ನಾಲ್ಕು ಜಲಾಶಯಗಳಿಗೆ ಒಳಹರಿವು ಬಹುತೇಕ ಕುಂಠಿತಗೊಂಡಿದ್ದು, CWMA ಆದೇಶ ರಾಜ್ಯಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

    ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಹಿಂದಿನ ಆದೇಶದಂತೆ ರಾಜ್ಯವು ತಮಿಳುನಾಡಿಗೆ ಅಕ್ಟೋಬರ್‌ 31ರವರೆಗೂ ನಿತ್ಯ 3000 ಕ್ಯೂಸೆಕ್ ನೀರು ಹರಿಸುತ್ತಿತ್ತು. ಬರದ ನಡುವೆ ನೀರನ್ನು ತಮಿಳುನಾಡಿಗೆ ಹರಿಸುವ ಅನಿವಾರ್ಯತೆ ರಾಜ್ಯಕ್ಕೆ ಸೃಷ್ಟಿಯಾಗಿದೆ. ಸದ್ಯ ಪ್ರಾಧಿಕಾರದ ಆದೇಶ ಹೊರಬಂದಿದ್ದು, ಈ ಬಗ್ಗೆ ಸರ್ಕಾರದ ನಿಲುವನ್ನು ಕಾದುನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts