ಗಣಿತ ಶಿಕ್ಷಕಿಯನ್ನು ಮದುವೆಯಾದ ಕಬ್ಜ ನಟ; ಫೋಟೋಗಳನ್ನು ನೋಡಿ

Kabir Duhan Singh
Published on

ಮುಂಬೈ: ನಟ ಕಬೀರ್ ದುಹಾನ್ ಸಿಂಗ್ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಪ್ರಮುಖ ಖಳನಟ. ಈ ನಟ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Kabir Duhan Singh

ಸೌತ್ ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟ ಕಬೀರ್ ದುಹಾನ್ ಸಿಂಗ್, ದೆಹಲಿಯಲ್ಲಿ ಸೀಮಾ ಚಾಹಲ್ ಅವರನ್ನು ವಿವಾಹವಾಗಿದ್ದಾರೆ. ವಧು ಸೀಮಾ ವೃತ್ತಿಯಲ್ಲಿ ಗಣಿತ ಶಿಕ್ಷಕಿಯಾಗಿದ್ದಾರೆ. ಹರಿಯಾಣದಿಂದ ಬಂದವರು ಎನ್ನಲಾಗಿದೆ.

ತಮ್ಮ ಮದುವೆಯ ಚಿತ್ರಗಳನ್ನು ಕಬೀರ್ ದುಹಾನ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್​​ ಮಾಡುವ ಮೂಲಕವಾಗಿ ನವದಂಪತಿಗೆ ಶುಭಕೋರಿದ್ದಾರೆ.

ಕಬೀರ್ ದುಹಾನ್ ಸಿಂಗ್ ದೆಹಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಕಬೀರ್ ಶೇರ್ವಾನಿ ಧರಿಸಿದ್ದರೆ, ವಧು ಕುಂದನ್ ಆಭರಣದೊಂದಿಗೆ ಅಲಂಕೃತಗೊಂಡ ಕೆಂಪು ಲೆಹೆಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರು.

ಕಬೀರ್ ದುಹಾನ್ ಸಿಂಗ್ ಅವರು 2015 ರಲ್ಲಿ ಬಿಡುಗಡೆಯಾದ ಅಜಿತ್ ಕುಮಾರ್ ಅಭಿನಯದ ವೇದಲಂ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುವ ಮೂಲಕ ತಮಿಳಿನಲ್ಲಿ ಪಾದಾರ್ಪಣೆ ಮಾಡಿದರು. ಉಪೇಂದ್ರ ಮತ್ತು ಸುದೀಪ್ ಅವರ ಕಬ್ಜದ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net