ನಾವ್​ ಆವಾಗ್ಲೆ ಹಂಗೆ, ಇವಾಗ್​ ಕೇಳ್ಬೇಕಾ!; ಧನಂಜಯ್​ ಫೋಟೋ ಹೇಳುತ್ತೆ ಇಂಥದ್ದೊಂದು ಡೈಲಾಗ್​...

dddd
Published on

ನಟ ಧನಂಜಯ್​ ಶಾಲಾ ದಿನಗಳಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದರು ಎಂಬುದು ಗೊತ್ತಿರುವ ವಿಚಾರ. ಹಲವು ಸಂದರ್ಶನಗಳಲ್ಲಿ ಅದನ್ನು ಅವರೇ ಹೇಳಿಕೊಂಡಿದ್ದೂ ಉಂಟು. ಇದೀಗ ಅದಕ್ಕೆ ಸಾಕ್ಷಿಯೊಂದು ಸಿಕ್ಕಿದೆ.

ಹೌದು, ಸೋಷಿಯಲ್​ ಮೀಡಿಯಾದಲ್ಲಿ ನಟ ಧನಂಜಯ ಛದ್ಮವೇಷದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೋಕ್ಕೆ ಅಭಿಮಾನಿ ವಲಯದಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಬಗೆಬಗೆ ಕಮೆಂಟ್​ ಮೂಲಕ ನಟರಾಕ್ಷಸನ ಫೋಟೋಕ್ಕೆ ಲೈಕ್​ ನೀಡುತ್ತಿದ್ದಾರೆ. ‘ಆವಾಗಲೇ ಹಂಗೆ ಇನ್ನು ಇವಾಗ್​ ಕೇಳ್ಬೇಕಾ..’ ಎನ್ನುತ್ತಿದ್ದಾರೆ.

ಅಂದಹಾಗೆ, ಏಳನೇ ತರಗತಿಯಲ್ಲಿ ರಾಜಕುಮಾರನ ಪಾತ್ರವೊಂದನ್ನು ಧನಂಜಯ ನಿಭಾಯಿಸಿದ್ದರು. ಅದಕ್ಕೆ ಶಾಲೆಯಲ್ಲಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಆ ಚಿತ್ರವನ್ನು ಶೇರ್​ ಮಾಡಿಕೊಂಡು, ಏಳನೇ ತರಗತಿಯಲ್ಲಿ ರಾಜಕುಮಾರನ ಪಾತ್ರದಲ್ಲಿ.. ಎಂಬ ಕ್ಯಾಪ್ಶನ್ ನೀಡಿ ಶೇರ್​ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net