

ಬೆಂಗಳೂರು: ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮತ್ತು ನಟಿ ಆರಾಧನಾ ರಾಮ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ‘ಕಾಟೇರ’ ಚಿತ್ರದ ಎರಡನೇ ಪತ್ರಿಕಾಗೋಷ್ಠಿಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ಕಲಾವಿದರು, ಹಲವು ಸಂಗತಿಗಳನ್ನು ಹಂಚಿಕೊಂಡರು. ಇದೇ ವೇಳೆ ಪ್ಯಾನ್ ಇಂಡಿಯಾ ಚಿತ್ರಗಳ ಕುರಿತು ಖಡಕ್ ಆಗಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಮ್ಮ ಜಾಗವಿದು, ನಾವ್ಯಾಕೆ ಹೆದರಬೇಕು ರೀ ಎಂದು ಹೇಳಿದರು.
ಮೊದಲಿಗೆ ಮಾತನಾಡಿದ ದರ್ಶನ್, "29ಕ್ಕೆ ನಾವು ಬರೋಣ ಅಂದುಕೊಂಡಿದ್ದೀವಿ, ನಮ್ಮ ಸಿನಿಮಾ ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರೋಣ ರೀ? ನಮ್ಮ ಮನೆಗೆ ಬರೋದಿಕ್ಕೆ ಇನ್ನೊಬ್ಬರಿಗೆ ಅಥವಾ ಅವರಿಗೆ ಭಯ ಇರಬೇಕು! ನಮಗ್ಯಾಕೆ ಇರಬೇಕು" ಎಂದರು.
"ಯಾಕಂದ್ರೆ ನಮ್ಮ ಕನ್ನಡ ಜನಗಳು ಇದ್ದಾರೋ ಇಲ್ವೋ ಅಂತ ನಮಗೆ ಡೌಟ್ ಬಂದು ಬಿಡಬೇಕು..ಆದ್ರೆ, ಕನ್ನಡ ಸಿನಿಮಾಗಳು ಚೆನ್ನಾಗಿದ್ದಾಗ ಕನ್ನಡಿಗರು ಯಾವಾಗಲೂ ಕೈಹಿಡಿದೇ ಹಿಡಿಯುತ್ತಾರೆ. ಆಮೇಲೆ"........ಮತ್ತಷ್ಟು ವಿಷಯ ತಿಳಿಯಲು ಕೆಳಗಿನ ವಿಡಿಯೋ ನೋಡಿ.