

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ಮಿಂಚುತ್ತಿರುವ ನಟ ಚಿಕ್ಕಣ್ಣ ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ತಮ್ಮ ಸಿನಿ ಪಯಣ ಹಾಗೂ ಚಿತ್ರರಂಗಕ್ಕೂ ಎಂಟ್ರಿ ಕೊಡುವ ಮುನ್ನ ನಡೆದ ಹಲವು ಘಟನೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಈ ವಿಷಯಗಳ ಮಧ್ಯೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದಾಗ ತಮಗೆ ಸಿಕ್ಕ ಮೊದಲ ಸಂಬಳ ಎಷ್ಟು ಎಂಬುದನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಹಾಗಾದ್ರೆ ಚಿಕ್ಕಣ್ಣ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ ಮಾಹಿತಿ.
"ನಾನು ಚಿತ್ರರಂಗಕ್ಕೆ ಬರುವ ಮೊದಲು ಗಾರೆ ಕೆಲಸ ಮಾಡುತ್ತಿದ್ದೆ, ನಾವೇನು ಕಳ್ಳತನ, ದರೋಡೆ ಅಥವಾ ಯಾವುದೇ ಕೆಟ್ಟ ಕೆಲಸ ಮಾಡಿಲ್ಲ. ನನಗೆ ಖುಷಿಯಿದೆ, ಯಾಕಂದ್ರೆ ಅವತ್ತಿಗೆ ಅದು ನನಗೆ ಅನ್ನ ಕೊಟ್ಟಿದೆ. ಅದು ಗ್ರೇಟ್. ಗಾರೆ ಕೆಲಸ ಮಾಡುವಾಗ ಒಂದು ದಿನಕ್ಕೆ 45 ರೂ. ಸಂಬಳವಾಗಿ ಕೊಡುತ್ತಿದ್ದರು. ಅದು ಒಂದು ದಿನದ ಕೂಲಿಯಾಗಿತ್ತು" ಎಂದು ಚಿಕ್ಕಣ ಹೇಳಿದ್ದಾರೆ.
"ನಾನು ಬೇಸಿಗೆ ರಜೆಯಿದ್ದಾಗ ಮಾತ್ರ ಗಾರೆ ಕೆಲಸಕ್ಕೆ ಹೋಗುತ್ತಿದ್ದೆ, ಅದರಲ್ಲಿ ಬಂದ ಹಣವನ್ನು ಮನೆಗೆ ಕೊಡ್ತಿದ್ದೆ. ಮತ್ತೆ ಶಾಲೆ ಪ್ರಾರಂಭವಾದಾಗ ಪೆನ್ನು, ಬುಕ್ ಖರೀದಿ ಮಾಡಲು ದುಡ್ಡು ಬೇಕಾಗುತ್ತೆ ಅಂತ ಕೆಲಸಕ್ಕೆ ಹೋಗ್ತಿದ್ದೆ. ಒಂದು ಸಲ........" ಮತ್ತಷ್ಟು ಕುತೂಹಲಕಾರಿ ಸಂಗತಿಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.