SA vs IND, ದ್ವಿತೀಯ ಟೆಸ್ಟ್: ಪತಿ ವಿರಾಟ್​ಗೆ ಸಾಥ್ ಕೊಡಲು ದ.ಆಫ್ರಿಕಾಗೆ ಬರಲಿಲ್ವಾ ಅನುಷ್ಕಾ ಶರ್ಮಾ? ಇಲ್ಲಿದೆ ಅಸಲಿ ಸಂಗತಿ!

ವಿಜಯವಾಣಿ-2023-12-30T132928.940
Published on

ಕೇಪ್​ ಟೌನ್: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಪೋಟಕ ಬ್ಯಾಟ್ಸ್​​ಮನ್​ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಪತಿಯ ಆಟಕ್ಕೆ ಪ್ರೋತ್ಸಾಹ ನೀಡಲು ದಕ್ಷಿಣ ಆಫ್ರಿಕಾಗೆ ಬರಲಿದ್ದಾರಾ? ಎಂದು ಕೆಲವರು ನಿರೀಕ್ಷಿಸಿದರೆ, ಇನ್ನು ಕೆಲವರು ಅವರು ಬರುವುದು ಬಹುತೇಕ ಡೌಟ್​ ಎಂದು ಊಹಿಸಿದ್ದರು. ಆದ್ರೆ, ಇದೀಗ ಮುಂಬರುವ ಸೌತ್​ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಪತಿಗೆ ಪ್ರೋತ್ಸಾಹಿಸಲು ಕೇಪ್​ಟೌನ್​ಗೆ ಬಂದಿಳಿದಿದ್ದಾರೆ.

ದಕ್ಷಿಣ ಆಫ್ರಿಕಾಗೆ ಬಂದಿಳಿದಿರುವ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿವೆ. ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್​ನಲ್ಲಿ ಪತಿಯ ಆಟವನ್ನು ವೀಕ್ಷಿಸುವ ಮೂಲಕ ವಿರಾಟ್​ಗೆ ಬೆಂಬಿಲಿಸಲು ಅನುಷ್ಕಾ ಆಗಮಿಸಿದ್ದಾರೆ.

2023ರ ವಿಶ್ವಕಪ್‌ನಲ್ಲಿ ಫೈನಲ್ ಮತ್ತು ಸೆಮಿಫೈನಲ್ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ಶರ್ಮಾ, ಸ್ಟೇಡಿಯಂನಲ್ಲಿ ಕುಳಿತು ಪ್ರೋತ್ಸಾಹಿಸುವ ಮುಖೇನ ಪತಿ ವಿರಾಟ್​ಗೆ ಪ್ರತಿ ಹಂತದಲ್ಲೂ ಸಾಥ್​ ನೀಡಿದ್ದಾರೆ. ಇಂದು ಬೆಳಗ್ಗೆ ದಕ್ಷಿಣ ಆಫ್ರಿಕಾದ ಬಿಗ್ ಮೌತ್ ರೆಸ್ಟೋರೆಂಟ್‌ನಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಂಡ ಫೋಟೋ ಸದ್ಯ ಜಾಲತಾಣದಲ್ಲಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net