

Actor Bala 4th Marriage: ಇತ್ತೀಚೆಗಷ್ಟೇ ಗಾಯಕಿ ಅಮೃತಾ ಸುರೇಶ್ (Amrutha Suresh) ಹಾಗೂ ಅವರ ಮಾಜಿ ಪತಿ, ನಟ ಬಾಲ (Bala) ಅವರ ಪುತ್ರಿ ಅವಂತಿಕ ತಂದೆಯ ಮಾತುಗಳಿಂದ ತೀವ್ರ ಬೇಸತ್ತು, ವಿಡಿಯೋ ಸಂದೇಶ ಹಂಚಿಕೊಂಡಿದ್ದರು. ನಿನ್ನ ಪ್ರೀತಿಸಲು ಒಂದೇ ಒಂದು ಕಾರಣವೂ ಉಳಿದಿಲ್ಲ. ಈತನ ಮಾತನ್ನು ಯಾರೂ ಸಹ ನಂಬಬೇಡಿ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಅಮೃತಾ, ದಾಂಪತ್ಯ ಜೀವನದಲ್ಲಿ ತಾನು ಅನುಭವಿಸಿದ ಚಿತ್ರಹಿಂಸೆಯನ್ನು ಎಳೆ ಎಳೆಯಾಗಿ ವಿಡಿಯೋ ಮುಖೇನ ಬಿಚ್ಚಿಟ್ಟು, ಕಣ್ಣೀರಿಟ್ಟಿದ್ದರು. ಅಂದಿನಿಂದಲೂ ಭಾರೀ ವಿವಾದ, ಟೀಕೆಗಳನ್ನು ಎದುರಿಸುತ್ತಿದ್ದ ಬಾಲಾ, ಇದೀಗ ಕಡೆಗೂ ತಾನು ನುಡಿದಂತೆಯೇ ನಾಲ್ಕನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇತ್ತೀಚೆಗಷ್ಟೇ ವಿವಾದಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ನಟ ಬಾಲಾ, ಯಾವ ಟ್ರೋಲ್, ನೆಗೆಟಿವ್ ವಿಮರ್ಶೆಗಳಿಗೂ ತಲೆಕೊಡದೆ, ನಾನು ಮತ್ತೊಂದು ಮದುವೆಯಾಗಲು ಸಿದ್ಧವಾಗಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದನ್ನು ಕೇಳಿದ ಬಳಿಕ ಟ್ರೋಲ್, ಛೀಮಾರಿಗಳು ವ್ಯಾಪಕವಾಗಿ ಕೇಳಿಬಂದಿದ್ದವು. ನಿಮಗೆ ಮತ್ತೊಂದು ವಿವಾಹ ಏಕೆ? ಎಂಬ ಪ್ರಶ್ನೆಗಳು ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಆದರೆ, ಇದ್ಯಾವುದಕ್ಕೂ ಕಿಂಚಿತ್ತು ಗಮನ ಹರಿಸಿದ ನಟ, ಇದೀಗ ಅಂತಿಮವಾಗಿ ತಮ್ಮ ಹೇಳಿಕೆಗೆ ಬದ್ಧವಾಗಿದ್ದು, ನಾಲ್ಕನೇ ಬಾರಿಗೆ ವಿವಾಹವಾಗಿದ್ದಾರೆ. ಈ ಬಾರಿ ಕೋಕಿಲ ಎಂಬ ಯುವತಿಗೆ ಮೂರು ಗಂಟು ಹಾಕಿರುವ ಬಾಲಾ, ತಮ್ಮ ಕುಟುಂಬದರನ್ನೇ ಮದುವೆ ಆಗಿರುವುದು ಸದ್ಯ ಅಚ್ಚರಿಗೆ ಕಾರಣವಾಗಿದೆ.
“ಅನೇಕರು ನಮ್ಮನ್ನು ಆಶೀರ್ವದಿಸಿದ್ದಾರೆ. ಆದರೆ, ಇನ್ನು ಕೆಲವರು ಟ್ರೋಲ್‌ಗಳ ಮೂಲಕ ನನ್ನನ್ನು ಟೀಕಿಸಿದ್ದಾರೆ. ಇದಕ್ಕೂ ಉತ್ತರಿಸುವ ಪ್ರಯತ್ನ ಮಾಡ್ತೇನೆ. ಇದೇ ನನ್ನ ಕೊನೆಯ ಮದುವೆಯಾಗಿದೆ. ಟ್ರೋಲ್‌ಗಳ ಬಗ್ಗೆ ಬೇಸರವಿದೆಯೇ ಎಂದು ನಾನು ನನ್ನ ಪತ್ನಿ ಕೋಕಿಲಾ ಅವರನ್ನು ಕೇಳಿದಾಗ, ಆಕೆ ಇಲ್ಲ ಎಂದು ಹೇಳಿದರು. ನಾನು ಯಾಕೆ ಎಂದು ಕೇಳಿದಾಗ, ಅವಳು ನನಗೆ ಮಲಯಾಳಂ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಟ್ರೋಲರ್ಗಳಿಗೆ ನನ್ನದೊಂದು ಮನವಿ ಇದೆ. ದಯವಿಟ್ಟು ನೀವು ಮಾಡುವ ಟ್ರೋಲ್‌ಗಳಲ್ಲಿ ಸ್ವಲ್ಪ ಇಂಗ್ಲಿಷ್ ಸೇರಿಸಿದರೆ, ನಮಗೂ ಅರ್ಥವಾಗುತ್ತದೆ. ಏನೇ ಆಗಲಿ, ಎಲ್ಲರೂ ಚೆನ್ನಾಗಿರಲಿ” ಎಂದು ಬಾಲಾ ನಗುತ್ತಲೇ ತಿರುಗೇಟು ನೀಡುವ ಪ್ರಯತ್ನ ಮಾಡಿರುವುದು ಇಲ್ಲಿ ಸ್ಪಷ್ಟವಾಗಿದೆ,(ಏಜೆನ್ಸೀಸ್).