ನಟಿ ಅದಿತಿ ಮದುವೆ ಡೇಟ್ ಫಿಕ್ಸ್: ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ ಆ ಸಾಲು ನೋಡಿ ಅಭಿಮಾನಿಗಳು ಫುಲ್​ ಖುಷ್

aditi prabhudeva
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರ ಮದುವೆ ಡೇಟ್​ ಫಿಕ್ಸ್​ ಆಗಿದೆ. ಕೊಡಗು ಮೂಲದ ಉದ್ಯಮಿ ಯಶಸ್ವಿ ಜೊತೆ ಇದೇ ನವೆಂಬರ್ 27 ಮತ್ತು 28ರಂದು ಹಸೆಮಣೆ ಏರಲಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಅದಿತಿ ಪ್ರಭುದೇವ ಅವರ ಮದುವೆ ಫಿಕ್ಸ್​ ಆಗಿತ್ತು.

ಮದುವೆ ಆಹ್ವಾನ ಪತ್ರಿಕೆಯಲ್ಲಿ 'ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ' ಎಂದು ಹಾಕಿಸಿಕೊಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ತಂದೆ-ತಾಯಿ, ಗುರು-ಹಿರಿಯರ, ಮನೆ ದೇವರ ಆಶೀರ್ವಾದದೊಂದಿಗೆ ಎಂದು ಮದ್ವೆ ಆಹ್ವಾನ ಪತ್ರಿಕೆಯಲ್ಲಿ ಹಾಕಿಸಿಕೊಳ್ಳೋದು ಸಾಮಾನ್ಯ. ಆದರೆ, ನಟಿ ಅದಿತಿ ಅವರು ತಮ್ಮ ಆಹ್ವಾನ ಪತ್ರಿಕೆಯಲ್ಲಿ ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ ಎಂದು ಹಾಕಿಸಿಕೊಂಡಿದ್ದು, ಅವರಲ್ಲಿನ ಕನ್ನಡಾಭಿಮಾನ ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಟ ರಾಜ್ಯೋತ್ಸವ ತಿಂಗಳಲ್ಲೇ ದಾಂಪತ್ಯ ಜೀವನಕ್ಕೂ ಕಾಲಿಡುತ್ತಿರುವ ಅದಿತಿ ಅವರಿಗೆ ಲಕ್ಷಾಂತರ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ದಾವಣಗೆರೆ ಮೂಲದ ಅದಿತಿ ಮೊದಲು ‘ನಾಗಕನ್ನಿಕೆ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದು, ನಂತರ ಧೈರ್ಯಂ ಸಿನಿಮಾ ಮೂಲಕ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದರು. ‘ಸಿಂಗ’, ‘ಬಜಾರ್’, ‘ರಂಗನಾಯಕಿ’, ‘ಬ್ರಹ್ಮಚಾರಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net