

ಬೆಂಗಳೂರು: ರಾಜ್ಯದಲ್ಲಿ ನಾಲ್ಕನೇ ಬಾರಿಗೆ ಕರೊನಾ ಸೋಂಕಿತರ ಸಂಖ್ಯೆ 9 ಸಾವಿರದ ಗಡಿ ದಾಟಿದೆ. ಇಂದು 9,260 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ 3,79,486 ಜನರಲ್ಲಿ ಸೋಂಕು ಕಾಣಿಸಿಕೊಂಡಂತಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಒಂದು ಲಕ್ಷದ ಗಡಿ ದಾಟಲು ಇನ್ನು 900 ಕೇಸ್ಗಳಷ್ಟೇ ಬಾಕಿಯಿವೆ. ಅಲ್ಲಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿ ಇದ್ದಂತಾಗಿದೆ.
ಇಂದು ಚೇತರಿಕೆ ಕಂಡವರ ಸಂಖ್ಯೆ ಕೂಡ ಇಳಿಕೆಯಾಗಿದ್ದು, 6, 161ಜನರು ಗುಣವಾಗಿದ್ದಾರೆ. ಮೃತರ ಸಂಖ್ಯೆ ಕೂಡ ಶತಕ ದಾಟುತ್ತಲೇ ಇದ್ದು, ಇಂದು ಕೂಡ 116 ಜನರು ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 6170 ಆಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಕೂಡ ಹೆಚ್ಚಾಗಿ 785 ಆಗಿದೆ.
ರಾಜಧಾನಿಯಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿಯೇ ಇದೆ. ಇಂದು 2,963 ಜನರಲ್ಲಿ ಸೋಂಕು ಕಂಡು ಬಂದಿದೆ ಹಾಗೂ ಒಟ್ಟು ಸೋಂಕಿತರ ಸಂಖ್ಯೆ 1,41,664 ಕ್ಕೆ ತಲುಪಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವವ ಸಂಖ್ಯೆ ಕೂಡ ಇಳಿಕೆಯಾಗುತ್ತಿದ್ದು, 1,732 ಜನರಷ್ಟೇ ಇಂದು ಗುಣವಾಗಿದ್ದಾರೆ. ಈವರೆಗೆ ಒಟ್ಟು 97,926 ಕೋವಿಡ್ ರೋಗಿಗಳು ಚೇತರಿಕೆ ಕಂಡಿದ್ದಾರೆ.
ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 41,646ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಒಟ್ಟು 25 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 2,091ಕ್ಕೆ ತಲುಪಿದಂತಾಗಿದೆ. ನಿನ್ನೆ ಒಂದೇ ದಿನ 73,192 ಜನರಿಗೆ ಕರೊನಾ ಟೆಸ್ಟ್ ಮಾಡಲಾಗಿದ್ದು, ಈವರೆಗೆ ರಾಜ್ಯದಲ್ಲಿ ಈವರೆಗೆ ಒಟ್ಟು 31,97,110 ಜನರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ.